ಮಗನಿಂದಲೇ ತಂದೆಯ ಬರ್ಬರ ಹತ್ಯೆ
ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಸಾಕಿ ಸಲಹಿದ ತಂದೆಯನ್ನು ಮಗನೇ ಬಡಿಗೆಯಿಂದಲೇ ಹೊಡೆದು ಕೊಂದ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಗರ್ಡಾಡಿ ಗ್ರಾಮದ ಮುಂಡ್ಯೊಟ್ಟು ನಿವಾಸಿ ಶ್ರೀಧರ್ ಎಂಬವರು ಮಗನಿಂದ ಕೊಲೆಯಾದ ವ್ಯಕ್ತಿ. ಹರೀಶ್ ಎಂಬಾತ ಕೊಲೆ ಮಾಡಿದ ಮಗ. ಶ್ರೀಧರ್ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣುಗಳಿದ್ದು, ಈ ಪೈಕಿ ಹರೀಶ್ ತಂದೆಯನ್ನೇ ಕೊಲೆಗೈದಿದ್ದಾನೆ. ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವೇಣೂರು ಪೋಲಿಸ್ ಠಾಣೆಯಲ್ಲಿ […]