ಮಾದಕ ವ್ಯಸನ ಸಮಾಜಕ್ಕೆ ಮಾರಕ: ಆಪ್ತ ಸಮಾಲೋಚಕ ಲೋಹಿತ್ ಕೆ.

ಉಡುಪಿ: ಮಾದಕ ವಸ್ತುಗಳ ಸೇವನೆ ಎನ್ನುವುದು ವ್ಯಕ್ತಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಮಾರಕವಾಗಿದೆ. ಇಂದು ಸಮಾಜದಲ್ಲಿ ಅತ್ಯಾಚಾರ, ಕೊಲೆ ಹಾಗೂ ವಿವಾಹ ವಿಚ್ಛೇದನದಂತಹ ಪ್ರಕರಣಗಳು ಹೆಚ್ಚಾಗಲು ಇದೇ ಕಾರಣ. ಹದಿಹರೆಯದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಿ ಸಮಾಜ ಘಾತಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ ಎಂದು ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗಾ ಆಸ್ಪತ್ರೆಯ ಮನೋರೋಗ ವಿಭಾಗದ ಆಪ್ತ ಸಮಾಲೋಚಕ ಲೋಹಿತ್ ಕೆ. ಕಳವಳ ವ್ಯಕ್ತಪಡಿಸಿದರು. ಶಿರ್ವ ಸಂತಮೇರಿ ಕಾಲೇಜಿನ ವ್ಯಸನಮುಕ್ತ ಕೋಶ ಮತ್ತು ಐಕ್ಯೂಎಸಿ ಇದರ ನೇತೃತ್ವದಲ್ಲಿ ಕಾಲೇಜಿನಲ್ಲಿ ಮಂಗಳವಾರ […]