ಖ್ಯಾತ ಸಾಹಿತಿ ಮಮ್ತಾಜ್ ಬೇಗಂ ಬೆಳಪು ಇನ್ನಿಲ್ಲ
ಉಡುಪಿ: ಖ್ಯಾತ ಸಾಹಿತಿ ಬೆಳಪು ಮಿಲಿಟರಿ ಕಾಲೊನಿ ನಿವಾಸಿ ಮಮ್ತಾಜ್ ಬೇಗಂ (73) ಅವರು ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಐದು ದಶಕಗಳಿಂದ ಸಾಹಿತ್ಯ ಮತ್ತು ಬರಹ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದಿದ್ದ ಅವರು ಅವ್ಯಕ್ತ, ಪರದೇಶಿ, ವರ್ತುಲ, ಬಂದಳಿಕೆ, ಚಿಂಪಿ, ಸರ್ವ ಋತುಗಳೂ ನಿನಗಾಗಿ, ಅಂಕುರ ಸಹಿತ ಹಲವಾರು ಕಥೆ, ಕವನ, ಕಾದಂಬರಿ ಸಹಿತ ವಿವಿಧ ಪುಸ್ತಕಗಳನ್ನು ಬರೆದಿದ್ದರು. ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅತ್ತಿಮಬ್ಬೆ, ಚೆನ್ನಶ್ರೀ, ಜಿಲ್ಲಾ ರಾಜ್ಯೋತ್ಸವ, ಮಾತೃಶ್ರೀ […]