ಸುಳ್ಳು ಸುದ್ದಿ ಪ್ರಸಾರದ ಆರೋಪ: ಎನ್‌ಡಿಟಿವಿ ಸುದ್ದಿ ವಾಹಿನಿಯ ವಿರುದ್ಧ ದೂರು ದಾಖಲು
ಅಹಮದಾಬಾದ್: ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಎನ್‌ಡಿಟಿವಿ ಸುದ್ದಿ ವಾಹಿನಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎನ್ ಡಿಟಿವಿಯು ಕಛ್ ಜಿಲ್ಲೆಯ ಗಾಂಧಿಧಾಮದ ತನಿಷ್ಕ್ ಮಳಿಗೆಯ ಮೇಲೆ ಗುಂಪೊಂದು ದಾಳಿ ನಡೆಸಿದೆ ಎಂದು ಸುದ್ದಿ ಮಾಡಿತ್ತು. ಇದು ಸುಳ್ಳು ಸುದ್ದಿ ಎಂದು ಆರೋಪಿಸಿ ರಮೇಶ್ ಅಹಿರ್ (ಮೈತ್ರ) ಎನ್ನುವವರು ಎನ್‌ಡಿಟಿವಿ ವಿರುದ್ಧ ದೂರು ದಾಖಲಿಸಿದ್ದಾರೆ.