ಪುದುಚೇರಿ ಕಾಂಗ್ರೆಸ್ ಸರ್ಕಾರ ಪತನ: ಸಿಎಂ ಸ್ಥಾನಕ್ಕೆ ವಿ.ನಾರಾಯಣಸ್ವಾಮಿ ರಾಜೀನಾಮೆ
ಪುದುಚೇರಿ: ಇಬ್ಬರು ಶಾಸಕರ ರಾಜೀನಾಮೆಯಿಂದ ಅಲ್ಪಮತಕ್ಕೆ ಕುಸಿದಿದ್ದ ಸಿಎಂ ನಾರಾಯಣ ಸ್ವಾಮಿ ನೇತೃತ್ವದ ಪುದುಚೇರಿ ಕಾಂಗ್ರೆಸ್ ಸರ್ಕಾರ ವಿಶ್ವಾಸಮತಯಾಚನೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾಗಿದ್ದು, ಇದರಿಂದ ಸರ್ಕಾರ ಪತನಗೊಂಡಿದೆ. ಕಾಂಗ್ರೆಸ್ ಶಾಸಕ ಲಕ್ಷ್ಮೀನಾರಾಯಣನ್ ಮತ್ತು ಡಿಎಂಕೆ ಶಾಸಕ ವೆಂಕಟೇಶನ್ ಅವರ ರಾಜೀನಾಮೆ ಬಳಿಕ ಸರ್ಕಾರ ಅಲ್ಪಮತಕ್ಕೆ ಕುಸಿದಿತ್ತು. ಈ ಹಿನ್ನಲೆಯಲ್ಲಿ ಇಂದು ಸಿಎಂ ನಾರಾಯಣ ಸ್ವಾಮಿ ವಿಶ್ವಾಸ ಮತಯಾಚನೆ ಮಾಡಬೇಕಿತ್ತು. ಆದರೆ ಬಹುಮತ ಸಾಬೀತುಪಡಿಸುವಲ್ಲಿ ನಾರಾಯಣ ಸ್ವಾಮಿ ವಿಫಲರಾದರು. ಸರ್ಕಾರ ಉಳಿಸಿಕೊಳ್ಳುವ ನಾರಾಯಣ ಸ್ವಾಮಿ ಪ್ರಯತ್ನ ಕಡೆಗೂ ಫಲ ನೀಡಲಿಲ್ಲ. […]