ನಕಲಿ ಆಯುರ್ವೇದ ಔಷಧ ಮಾರಾಟ: ಆರು ಮಂದಿಯ ಬಂಧನ

ಬೆಂಗಳೂರು: ನಕಲಿ ಆಯುರ್ವೇದ ಔಷಧ ಮಾರಾಟ ಮಾಡುತ್ತಿದ್ದ ಆರು ಜನರ ತಂಡವನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಸಂಜಿತ್, ಮಂಜುನಾಥ್, ಶಿವಲಿಂಗ, ರಮಾಕಾಂತ್, ಕಿಶನ್, ಕಲ್ಲೋಳಪ್ಪ ಬಂಧಿತ ಆರೋಪಿಗಳು. ಇವರಿಂದ ನಕಲಿ ಆಯುರ್ವೇಧಿಕ್ ಔಷಧಿ ಸೇರಿ 5 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ವಯೋ ಸಹಜ ಕಾಯಿಲೆಗಳಿಗೆ ಔಷಧ ಕೊಡುವ ಸೋಗಿನಲ್ಲಿ ಹಿರಿಯ ನಾಗರಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಬಳಿಕ ಕಾಯಿಲೆ ವಾಸಿ ಮಾಡುವುದಾಗಿ ವೃದ್ಧರನ್ನು ನಂಬಿಸುತ್ತಿದ್ದರು. ಅಲ್ಲದೇ, ವಾಸಿಯಾಗದಿದ್ದಲ್ಲಿ ಹಣ ವಾಪಸ್ಸು […]