ಸತ್ಯ ಪರಿಶೀಲನಾ ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಎಡಿಟರ್ಸ್ ಗಿಲ್ಡ್

ನವದೆಹಲಿ: ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ “ನಕಲಿ ಸುದ್ದಿ” ಗಳ ಮೇಲೆ ನಿಗಾ ಇಡಲು ಸತ್ಯ ಪರಿಶೀಲನಾ (Fact-Check) ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ. ಅಂತಹ ವಿಷಯವನ್ನು ಪರಿಶೀಲಿಸುವ ಪ್ರಯತ್ನಗಳು ಸರ್ಕಾರದ ಏಕಸ್ವಾಮ್ಯದಲ್ಲಿಲ್ಲದ ಸ್ವತಂತ್ರ ಸಂಸ್ಥೆಗಳಿಂದ ಆಗಿರಬೇಕು ಎಂದು ಗಿಲ್ಡ್ ಒತ್ತಾಯಿಸಿದೆ. ಏಕೆಂದರೆ ಅವುಗಳು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗುತ್ತವೆ ಎಂದು ಅದು ಹೇಳಿದೆ. ಅಂತಹ ಯಾವುದೇ ಮೇಲ್ವಿಚಾರಣಾ ಚೌಕಟ್ಟುಗಳು ಪೂರ್ವ ಸೂಚನೆ ನೀಡುವುದು, ಮೇಲ್ಮನವಿ […]