ಉಡುಪಿಗೂ ಕಾಲಿಟ್ಟಿತು ಕೆಂಗಣ್ಣು ರೋಗ: ದ.ಕದಲ್ಲಿ ಸೋಂಕಿತರ ಪ್ರಮಾಣ ಇಳಿಕೆ
ಉಡುಪಿ: ದ.ಕನ್ನಡದಾದ್ಯಂತ ಜನಸಾಮಾನ್ಯರನ್ನು ಕಾಡಿದ ಕೆಂಗಣ್ಣು ರೋಗ ಇದೀಗ ಉಡುಪಿಗೂ ಕಾಲಿಟ್ಟಿದ್ದು, ರೋಗಕ್ಕೆ ತುತ್ತಾಗುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ತಾಲೂಕುಗಳಲ್ಲಿ ಕೆಂಗಣ್ಣು ರೋಗಕ್ಕೆ ಹಲವರು ತುತ್ತಾಗಿದ್ದಾರೆ. ಈ ಮಧ್ಯೆ, ದ.ಕನ್ನಡದಲ್ಲಿ ರೋಗ ಬಾಧೆ ಇಳಿಕೆಯಾಗಿದ್ದು ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಉಡುಪಿ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೆಂಗಣ್ಣಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಂಗಣ್ಣು ರೋಗವು ಒಂದು ವೈರಾಣು ಬಾಧಿತ ರೋಗವಾಗಿದ್ದು, ವಾರದೊಳಗೆ ಗುಣಮುಖವಾಗುತ್ತದೆ. ಕೆಂಗಣ್ಣು ರೋಗದಿಂದ […]