ಸ್ಟಾರ್ ನಟ ಕಮ್ ನಿರ್ದೇಶಕನೊಂದಿಗೆ ನಟಿ ಸಂಜನಾಗೆ ನಂಟು: ಸಿಸಿಬಿ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರು: ಡ್ರಗ್ಸ್ ದಂಧೆಯ ನಂಟಿನ ಆರೋಪದಡಿ ಸಿಸಿಬಿಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕ, ಬಹುಭಾಷಾ ನಟನೊಂದಿಗೆ ನಂಟು ಇತ್ತು ಎಂಬ ವಿಚಾರ ಈಗ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ. ಪೊಲೀಸರು ಸಿದ್ಧಪಡಿಸಿರುವ ಬಂಧಿತ ನಟಿಯರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಲಿಸ್ಟ್ ನಲ್ಲಿ ಈ ಸ್ಟಾರ್ ನಿರ್ದೇಶಕನ ಹೆಸರಿದೆ. ಈ ಸ್ಟಾರ್ ನಿರ್ದೇಶಕ ಸಂಜನಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಗೆ ಹೆಚ್ಚು ಆಪ್ತನಾಗಿದ್ದ. ಅಲ್ಲದೆ, ಆಕೆಗೆ ಸ್ಯಾಂಡಲ್ ವುಡ್ ನಲ್ಲಿ ಗಾಢ್ ಫಾದರ್ ನಂತಿದ್ದ. […]