ಮಣಿಪಾಲ ಕೆಎಸ್ ಬಿಸಿಎಲ್ ಡಿಪ್ಪೊದಲ್ಲಿ ಅವಧಿ ಮೀರಿದ ಲಕ್ಷಾಂತರ ಮೌಲ್ಯದ ಮದ್ಯ ನಾಶ
ಮಣಿಪಾಲ: ಅಬಕಾರಿ ಉಡುಪಿ ಉಪವಿಭಾಗದ ಮಣಿಪಾಲ ಕೆಎಸ್ ಬಿಸಿಎಲ್ ಡಿಪ್ಪೊದಲ್ಲಿನ ಅವಧಿ ಮೀರಿದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನು ಡಿ. 30ರಂದು ನಾಶಪಡಿಸಲಾಯಿತು. 1505 ಲೀಟರ್ ಲಿಕ್ಕರ್, 750 ಲೀಟರ್ ವೈನ್, 2769 ಲೀಟರ್ ಬಿಯರ್ ಅಧಿಕಾರಿಗಳ ಸಮಕ್ಷಮದಲ್ಲಿ ನಾಶ ಪಡಿಸಲಾಯಿತು. ಈ ಸಂದರ್ಭದಲ್ಲಿ ಅಬಕಾರಿ ಉಪ ಅಧೀಕ್ಷಕರು, ಉಪ ಮ್ಯಾನೇಜರ್, ನಿರೀಕ್ಷಕರು ಹಾಗೂ ಮಾರಾಟ ಪ್ರತಿನಿಧಿಗಳು ಹಾಜರಿದ್ದರು.