ಜ.13 ರಿಂದ 15 ಪವರ್ ಪ್ರಸ್ತುತ ಪಡಿಸುವ 4 ನೇ ಆವೃತ್ತಿಯ ಪವರ್ ಪರ್ಬ 2023- ಗ್ರಾಂಡ್ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಪವರ್ ಪರ್ಬವು ಪವರ್ ಸಂಸ್ಥೆಯಿಂದ ಉಡುಪಿಯಲ್ಲಿ ಆಯೋಜಿಸಲ್ಪಡುತ್ತಿರುವ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಮಹಿಳಾ ಉದ್ಯಮಿಗಳ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಪ್ರಮುಖ ಉದ್ದೇಶವನ್ನು ಹೊಂದಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪೂನಂ ಶೆಟ್ಟಿ ಹೇಳಿದರು. ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪವರ್ ಪರ್ಬ ಉಡುಪಿಯ ಜನರ ಆಕರ್ಷಣೆಯ ಹಾಗೂ ಮೆಚ್ಚುಗೆಯ ಕಾರ್ಯಕ್ರಮವಾಗಿದ್ದು ಉತ್ತಮ ಜನ ಸ್ಪಂದನೆಗೆ ಪಾತ್ರವಾಗಿದೆ. ಮಹಿಳಾ ಉದ್ಯಮಿಗಳಿಂದಲೇ ಉತ್ಪಾದಿಸಿ ಮಾರುಕಟ್ಟೆ ಮಾಡಲ್ಪಡುತ್ತಿರುವ ವಿಭಿನ್ನ ಉತ್ಪನ್ನಗಳು ಮತ್ತು ಸೇವೆಗಳ ಪರಿಚಯ ಹಾಗೂ ಮಾಹಿತಿಯನ್ನು […]