ಈ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ಸರ್ಕಾರಿ ಉದ್ಯೋಗ, ವಾಶಿಂಗ್ ಮೆಶಿನ್, 2ಜಿಬಿ ಡೇಟಾ
ಚೆನ್ನೈ: ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಜನಪ್ರಿಯ ಯೋಜನೆಗಳನ್ನು ಘೋಷಿಸುವ ಮೂಲಕ ಮತದಾರರ ಒಲೈಕೆಗೆ ಮುಂದಾಗಿದೆ. ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಏನಿದೆ.?: ಪ್ರತಿ ಕುಟುಂಬಕ್ಕೂ ಒಂದು ಸರ್ಕಾರಿ ಉದ್ಯೋಗ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಾರ್ಷಿಕ 2GB ಡೇಟಾ ಹಾಗೆ ವಾರ್ಷಿಕವಾಗಿ 6 ಸಿಲಿಂಡರ್ಗಳನ್ನು ಮನೆ ಬಳಕೆಗೆ ನೀಡುವುದಾಗಿಯೂ ಪಕ್ಷ ಘೋಷಿಸಿದೆ. ಸೋಲಾರ್ ಒಲೆ ಮತ್ತು ವಾಶಿಂಗ್ಮಶಿನ್ಗಳನ್ನು ಎಲ್ಲಾ ಮನೆಗೂ ಒದಗಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ. ಸಿಎಎ ವಿರುದ್ಧವೂ ಹೋರಾಟ ನಡೆಸುವುದಾಗಿ ಭರವಸೆ […]