ಸಮಾಜದ ಶೋಷಿತರ, ದೀನದಲಿತರ ಸೇವೆಯಲ್ಲಿ ತೊಡಗಿಕೊಳ್ಳಿ: ಕುಂಬ್ಳೆಕಾರ್
ಉಡುಪಿ: ಸಹಕಾರ ಭಾರತಿ ಉಡುಪಿ ತಾಲೂಕು ವತಿಯಿಂದ ಸ್ಥಾಪನಾ ದಿನಾಚರಣೆ ಕಾರ್ಯಕ್ರಮ ದಿನೇಶ್ ಹೆಗ್ಡೆ ಆತ್ರಾಡಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಉಡುಪಿ ನಿರ್ಮಾಣ ಸೌಹಾರ್ದ ಸಹಕಾರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ವಿಭಾಗ ಸಂಘಟನಾ ಪ್ರಮುಖ ಕುಂಬ್ಳೆಕಾರ್ ಮೋಹನ್ ಕುಮಾರ್, ಸ್ವಾತಂತ್ರ್ಯ ಯೋಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ ಪ್ರಯುಕ್ತ ಪರಾಕ್ರಮ ದಿನಾಚರಣೆ ಮತ್ತು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ವೀರ ಸಾವರ್ಕರ್ ಅವರ ದೇಶ ಭಕ್ತಿಯ ಬಗ್ಗೆ ತಿಳಿಸಿದರು. ಮುಂದಿನ ನವ ಪೀಳಿಗೆಗೆ […]