ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಲೈವ್ ಎಂಡೋಸ್ಕೋಪಿ ಮತ್ತು ಬಂಜೆತನ ಅಲ್ಟ್ರಾಸೌಂಡ್ ಕಾರ್ಯಾಗಾರ
ಮಣಿಪಾಲ: ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಅಂಗ ಸಂಸ್ಥೆಯಾಗಿರುವ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಂತಾನೋತ್ಪತ್ತಿ ಔಷಧ ಮತ್ತು ಶಸ್ತ್ರಚಿಕಿತ್ಸಾ ವಿಭಾಗವು ಜ. 28 ರಂದು ಎಂಡೋಸ್ಕೋಪಿ ಕಾರ್ಯಾಗಾರ ಮತ್ತು ಜ.29 ರಂದು ಬಂಜೆತನ ಅಲ್ಟ್ರಾಸೌಂಡ್ ಕುರಿತು ನೇರಪ್ರಸಾರದ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಾಗಾರವನ್ನು ಮಣಿಪಾಲದ ಮಾಹೆಯ ಬೋಧಕ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಉದ್ಘಾಟಿಸಿ, ನೇರ ಪ್ರಸಾರದ […]