ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ಎಂಡೋಸ್ಕೋಪಿ ಶಸ್ತ್ರಚಿಕಿತ್ಸೆ ಯಶಸ್ವಿ

ಮಣಿಪಾಲ: ಇಲ್ಲಿನ ಕೆ.ಎಂ.ಸಿ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಿರನ್ ಶೆಟ್ಟಿ ನೇತೃತ್ವದ ವೈದ್ಯರ ತಂಡ ಡಾ. ಗಣೇಶ್ ಭಟ್, ಡಾ. ಅತಿಶ್ ಶೆಟ್ಟಿ, ಡಾ. ಬಾಲಾಜಿ ಮತ್ತು ಡಾ. ಸಂದೇಶ್ ಶೇಟ್ (ಅರಿವಳಿಕೆ) ಸಹಾಯದೊಂದಿಗೆ ಎಂಡೋಅಲ್ಟ್ರಾಸೌಂಡ್ ಗೈಡೆಡ್ ಗ್ಯಾಸ್ಟ್ರೋಜೆಜುನೋಸ್ಟೋಮಿ ಎಂಬ ಸಂಕೀರ್ಣ ವಿನೂತನ ಎಂಡೋಸ್ಕೋಪಿ ಕಾರ್ಯವಿಧಾನ (ಶಸ್ತ್ರಚಿಕಿತ್ಸೆ)ವನ್ನು ಯಶಸ್ವಿಯಾಗಿ ನಡೆಸಿದರು. ಕ್ಯಾನ್ಸರ್ ನಿಂದಾಗಿ ಗ್ಯಾಸ್ಟ್ರಿಕ್ ಔಟ್ಲೆಟ್ ಅಡಚಣೆಯನ್ನು ಹೊಂದಿರುವ ವ್ಯಕ್ತಿಗೆ ಯಶಸ್ವಿಯಾಗಿ ಈ ಕಾರ್ಯವಿಧಾನ ನಡೆಸಿದರು. ಈ ವಿಧಾನವು ಶಸ್ತ್ರಚಿಕಿತ್ಸೆಗಿಂತ […]