ಜಮ್ಮು-ಕಾಶ್ಮೀರದಲ್ಲಿ ಎನ್ ಕೌಂಟರ್: 2 ಎಲ್ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆದಿದೆ ಎಂದು ಪಿಟಿಐ ವರದಿ ಮಾಡಿದೆ. ಶೋಪಿಯಾನ್‌ನ ಅಲ್ಶಿಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿದ್ದು ಉಗ್ರರನ್ನು ಮಟ್ಟಹಾಕುತ್ತಿವೆ. ಕಾರ್ಯಾಚರಣೆಯಲ್ಲಿ 2 ಉಗ್ರರು ಹತರಾಗಿದ್ದಾರೆ. ಹತರಾದ ಭಯೋತ್ಪಾದಕರನ್ನು ಎಲ್ಇಟಿಯ ಮೋರಿಫತ್ ಮಕ್ಬೂಲ್ ಮತ್ತು ಜಾಜಿಮ್ ಫಾರೂಕ್ ಅಬ್ರಾರ್ ಎಂದು ಗುರುತಿಸಲಾಗಿದೆ. ಕಾಶ್ಮೀರಿ ಪಂಡಿತ್ ದಿವಂಗತ ಸಂಜಯ್ ಶರ್ಮಾ ಹತ್ಯೆಯಲ್ಲಿ ಭಯೋತ್ಪಾದಕ ಅಬ್ರಾರ್ ಭಾಗಿಯಾಗಿದ್ದಾನೆ ಎಂದು ಕಾಶ್ಮೀರ ಎಡಿಜಿಪಿ […]
ರಜೌರಿಯಲ್ಲಿ ಸೇನೆ ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ: ಹ್ಯಾಂಡ್ಲರ್ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ತೆತ್ತ ‘ಕೆಂಟ್’ ಆರ್ಮಿ ಶ್ವಾನ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಮಂಗಳವಾರ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸೇನಾ ಯೋಧ ಮತ್ತು ಶಂಕಿತ ಪಾಕಿಸ್ತಾನಿ ಭಯೋತ್ಪಾದಕ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಸ್ಥಳದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಭಯೋತ್ಪಾದಕರ ಜಾಡು ಹಿಡಿಯುತ್ತಿದ್ದ ಸೈನಿಕರ ತುಕುಡಿಯನ್ನು ಕೆಂಟ್ ಎಂಬ ಆರು ವರ್ಷದ ನಾಯಿ ಮುನ್ನಡೆಸುತ್ತಿತ್ತು. ಆರ್ಮಿಯ ಹೆಣ್ಣು ಶ್ವಾನ ಕೆಂಟ್ ‘ಆಪರೇಷನ್ ಸುಜಲಿಗಲ’ದ ಮುಂಚೂಣಿಯಲ್ಲಿತ್ತು. ಕೆಂಟ್ ಪಲಾಯನ ಮಾಡುವ ಭಯೋತ್ಪಾದಕರ ಜಾಡು ಹಿಡಿಯುತ್ತಾ ಸೈನಿಕರ ತುಕುಡಿಯನ್ನು ಮುನ್ನಡೆಸುತ್ತಿತ್ತು. ಈ ಸಂದರ್ಭ ಭಾರೀ […]
ಉತ್ತರಪ್ರದೇಶದ ಮಾಫಿಯಾ ಡಾನ್ ಅತೀಕ್ ಅಹ್ಮದ್ ಪುತ್ರ ಎಸ್‌ಟಿಎಫ್ ಎನ್‌ಕೌಂಟರ್ ನಲ್ಲಿ ಬಲಿ
ಝಾನ್ಸಿ: ಉತ್ತರ ಪ್ರದೇಶದ ರಾಜಕಾರಣಿಯಾಗಿ ಪರಿವರ್ತಿತ ಮಾಫಿಯಾ ಡಾನ್ ಅತೀಕ್ ಅಹ್ಮದ್ ಪುತ್ರ ಅಸದ್ ಮತ್ತು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಗುಲಾಮ್ ಎಂಬಾತನು ಝಾನ್ಸಿಯಲ್ಲಿ ಉತ್ತರಪ್ರದೇಶ ಎಸ್‌ಟಿಎಫ್ ತಂಡದೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ. ಪ್ರಯಾಗ್ ರಾಜ್ ನಲ್ಲಿ ನಡೆದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳ ಮೇಲೆ ತಲಾ ಐದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಝಾನ್ಸಿಯಲ್ಲಿ ಡಿವೈಎಸ್ಪಿ ನಾವೇಂದು ಮತ್ತು ಡಿವೈಎಸ್ಪಿ ವಿಮಲ್ […]
ಜಮ್ಮು ಮತ್ತು ಕಾಶ್ಮೀರ: ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರ ಹತ್ಯೆ
ಜಮ್ಮು: ಸೋಮವಾರ ಕಾಶ್ಮೀರದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ಏಳು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಎನ್‌ಕೌಂಟರ್‌ನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ರಾತ್ರಿಯ ಕಾರ್ಯಾಚರಣೆಯಲ್ಲಿ ಸತ್ತವರ ಸಂಖ್ಯೆ 4 ಕ್ಕೆ ತಲುಪಿದೆ. ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿ ನಡೆದ […]
ಜಮ್ಮು ಮತ್ತು ಕಾಶ್ಮೀರ: ಕುಪ್ವಾರ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಒಬ್ಬ ಸೇರಿದಂತೆ 2 ಎಲ್‌ಇಟಿ ಭಯೋತ್ಪಾದಕರನ್ನು ಮಟ್ಟ ಹಾಕಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಮಟ್ಟಹಾಕಿದೆ. ಇಬ್ಬರೂ ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಇ ತೈಬಾ (ಎಲ್‌ಇಟಿ) ಗೆ ಸೇರಿದವರು ಮತ್ತು ಇಬ್ಬರಲ್ಲಿ ಒಬ್ಬ ತುಫೈಲ್, ಪಾಕಿಸ್ತಾನದವನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ. ಇನ್ನಷ್ಟು ಉಗ್ರರಿಗಾಗಿ ಶೋಧ ಮುಂದುವರಿದಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಕುಪ್ವಾರದ ಚಕ್ರಸ್ ಕಂಡಿ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಸೋಮವಾರ ಮುಂಜಾನೆ, ಸೋಪೋರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ […]