ಭೂಮಿಯ ಅವಳಿಯಂತರಿರುವ ಸೌರಮಂಡಲದ ಈ ನಿಗೂಢ ಗ್ರಹವು ಮನುಷ್ಯನ ಅದೃಷ್ಟವನ್ನೇ ಬದಲಾಯಿಸಬಲ್ಲದು!
ವಿಜ್ಞಾನಿಗಳು ಶುಕ್ರ ಮತ್ತು ಭೂಮಿಯನ್ನು ಅವಳಿ-ಜವಳಿಗಳು ಎಂದು ಕರೆಯುತ್ತಾರೆ. ಏಕೆಂದರೆ ಈ ಎರಡೂ ಗ್ರಹಗಳ ಗಾತ್ರವು ಸಮಾನವಾಗಿದೆ. ಶುಕ್ರವು ಬಹುತೇಕ ಭೂಮಿಯಷ್ಟೇ ದೊಡ್ಡದಾಗಿದೆ. ಸೌರವ್ಯೂಹದ ಒಳಭಾಗದಲ್ಲಿಯೇ ಅವು ರೂಪುಗೊಂಡಿವೆ. ಶುಕ್ರವು ಭೂಮಿಗೆ ಅತ್ಯಂತ ಹತ್ತಿರದ ಗ್ರಹವಾಗಿದೆ. ಇವೆರಡೂ ಕೂಡಾ ಒಂದೇ ಮೂಲ ವಸ್ತುಗಳಿಂದ ಮಾಡಲ್ಪಟ್ಟಿದೆ. ಭೂಮಿಗೂ ಶುಕ್ರನಿಗೂ ತುಂಬಾ ಸಾಮ್ಯತೆ ಇದೆ. ಆದರೂ ಈ ಎರಡೂ ಗ್ರಹಗಳು ವಿಭಿನ್ನ ಮಾರ್ಗಗಳಲ್ಲಿ ಚಲಿಸುತ್ತವೆ! ಶುಕ್ರಗ್ರಹವು ತನ್ನ ಅಕ್ಷದ ಮೇಲೆ ಅಪ್ರದಕ್ಷಿಣಾಕಾರವಾಗಿ ಸುತ್ತುತ್ತದೆ. ಭೂಮಿ ಮತ್ತು ಇತರ ಗ್ರಹಗಳ ವಿರುದ್ದ […]
ಭೂಮಿಗೆ ಬಂತು ‘ಗುರು’ ಬಲ: 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿರುವ ಬೃಹಸ್ಪತಿ
ಖಗೋಳ ಶಾಸ್ತ್ರದ ಕುತೂಹಲಿಗಳಿಗೆ ಸಂಭ್ರಮಿಸುವ ಕ್ಷಣವೊಂದು ಸೋಮವಾರ, ಸೆಪ್ಟೆಂಬರ್ 26ರಂದು ದೊರಕಲಿದೆ. ಸೌರಮಂಡಲದ ಅತ್ಯಂತ ಬಲಶಾಲಿ ಅನಿಲ ದೈತ್ಯ ಗ್ರಹವಾದ ಗುರು ಅಥವಾ ಬ್ರಹಸ್ಪತಿಯು 59 ವರ್ಷಗಳ ಬಳಿಕ ಭೂಮಿಗೆ ಅತಿ ಸಮೀಪ ಬರಲಿದೆ. ಆ ದಿನದಂದು ಭೂಮಿಯಿಂದ ನೋಡಿದಾಗ ಗುರುವು ಸೂರ್ಯನ ನೇರ ಎದುರು ಅಂದರೆ ಸೂರ್ಯನ ವಿರುದ್ದ ದಿಕ್ಕಿನಲ್ಲಿರುತ್ತದೆ. ಈ ಖಗೋಳ ವ್ಯವಸ್ಥೆಯನ್ನು ‘ವಿರೋಧ’ ಎಂದು ಕರೆಯಲಾಗುತ್ತದೆ. ಸೂರ್ಯ ಪಶ್ಚಿಮದಲ್ಲಿ ಮುಳುಗುವಾಗ ಗ್ರಹವು ಪೂರ್ವದಲ್ಲಿ ಉದಯಿಸುವುದನ್ನು ವಿರೋಧ ಎನ್ನುತ್ತಾರೆ. ಈ ಸಮಯದಲ್ಲಿ ಗುರುವು ಅಸಾಮಾನ್ಯ […]
ಮಂಗಳನ ಅಂಗಳದಿಂದ ನಕ್ಷತ್ರದಂತೆ ಹೊಳೆಯುವ ಭೂಮಿಯ ಕಂಡಿರಾ….
ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ಯೂರಿಯಾಸಿಟಿ ನೌಕೆಯು ಮಂಗಳನ ಅಂಗಳದಲ್ಲಿದ್ದು, ಅಲ್ಲಿಂದ ರಾತ್ರಿ ಕಾಲದಲ್ಲಿ ಗಗನದಲ್ಲಿ ಮಿನುಗುವ ನಮ್ಮ ಭೂಮಿಯ ಚಿತ್ರವನ್ನು ಸೆರೆಹಿಡಿದಿದೆ. “ಮನೆಯಿಂದ 225 ಮಿಲಿಯನ್ ಕಿಮೀ ದೂರ, ಮಂಗಳದ ಮೇಲ್ಮೈಯಿಂದ ಭೂಮಿಯನ್ನು ನೋಡಿದಾಗ, ಮಂಗಳದ ರಾತ್ರಿ ಆಕಾಶದಲ್ಲಿ ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಭೂಮಿ ಹೊಳೆಯುತ್ತದೆ” ಎಂದು ಕ್ಯೂರಿಯಾಸಿಟಿಯು ಟ್ವಿಟರ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ.