ಇ-ಜನ್ಮ ತಂತ್ರಾಂಶದಲ್ಲಿ ಜನನ- ಮರಣ ದಾಖಲಾತಿ ಡಿಜಿಟಲೀಕರಣಕ್ಕೆ ಮಾರ್ಚ್ ವರೆಗೆ ಗಡು: ವೀಣಾ ಬಿ.ಎನ್
ಉಡುಪಿ: 2015 ರಿಂದ ಇ-ಜನ್ಮ ತಂತ್ರಾಂಶದಲ್ಲಿ ಜನನ- ಮರಣ ದಾಖಲಾಗುತ್ತಿದ್ದು, ಅದಕ್ಕಿಂತ ಹಿಂದಿನ ದಾಖಲೆಗಳನ್ನು ಸಹ ತಂತ್ರಾಂಶದಲ್ಲಿ ಕೇಂದ್ರೀಕರಿಸಲು ಪ್ರಸ್ತುತ ಕ್ರಮವಹಿಸಲಾಗುತ್ತಿದೆ. ಈ ಡಿಜಿಟಲೀಕರಣ ಕಾರ್ಯವನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ , ಜನನ- ಮರಣ ದಾಖಲೆಗಳನ್ನು ತಂತ್ರಾಂಶದಲ್ಲಿ ದಾಖಲಿಸುವ ಸಂದರ್ಭದಲ್ಲಿ ಮಾಹಿತಿಗಳನ್ನು ಪೂರ್ಣವಾಗಿ ಪರಿಶೀಲಿಸಿ, ನಿಖರವಾದ ಮಾಹಿತಿ ಅಳವಡಿಸುವುದರೊಂದಿಗೆ ತಿದ್ದುಪಡಿಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವಂತೆ ಸೂಚಿಸಿದರು. ಅವರು ಶುಕ್ರವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಕುರಿತ […]