ಜ್ಞಾನಸುಧಾ ಕಾಲೇಜಿನಲ್ಲಿ ಮೌಲ್ಯ ಸುಧಾ ಸರಣಿ ಕಾರ್ಯಕ್ರಮ

ಕಾರ್ಕಳ: ಡಿ.ವಿ.ಜಿಯವರ ಬದುಕು ಮತ್ತು ಕಾವ್ಯಕ್ಕೆ ವ್ಯತ್ಯಾಸವಿಲ್ಲ. ನಡೆಯೇ ನುಡಿಯಾಗಿಸಿ ಗೌರವ ಪಡೆದುದಕ್ಕೆ ಸಾಕ್ಷಿ ಮಂಕುತಿಮ್ಮನ ಕಗ್ಗವಾಗಿದೆ ಎಂದು ಮುಂಡ್ಕೂರು ವಿದ್ಯಾವರ್ಧಕ ಪಿಯು ಕಾಲೇಜಿನ ಕನ್ನಡ ಅಧ್ಯಾಪಕ ಪ್ರಭಾಕರ ಕೊಂಡಳ್ಳಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಶ್ರೀಮಹಾಗಣಪತಿ ದೇವಾಸ್ಥಾನ ಗಣಿತನಗರ ಹಾಗೂ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಸಹಯೋಗದೊಂದಿಗೆ ನಡೆದುಕೊಂಡು ಬರುತ್ತಿರುವ ಮೌಲ್ಯ ಸುಧಾ–ತಿಂಗಳ ಸರಣಿಯ ಎರಡನೆಯ ಕಾರ್ಯಕ್ರಮ ಕಗ್ಗದ ಬೆಳಕು ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ತಂತ್ರಜ್ಞಾನವನ್ನು ಹಣಕೊಟ್ಟು […]