ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಚುನಾವಣೆ: ಮೂರು ಸ್ಥಾನ ABVP ತೆಕ್ಕೆಗೆ
ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (DUSU) ಚುನಾವಣೆಯಲ್ಲಿ ನಾಲ್ಕು ಸೆಂಟ್ರಲ್ ಪ್ಯಾನಲ್ ಹುದ್ದೆಗಳ ಪೈಕಿ ಮೂರರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಗೆಲುವು ಸಾಧಿಸಿದೆ. ಶನಿವಾರ ಸಂಜೆ ಮತ ಎಣಿಕೆ ಮುಕ್ತಾಯಗೊಂಡಾಗ ಎಬಿವಿಪಿಯ ತುಷಾರ್ ದೇಧಾ ಡಿಯುಎಸ್‌ಯು ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ಎಬಿವಿಪಿಯ ಅಪರಾಜಿತಾ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸಚಿನ್ ಬೈಸ್ಲಾ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ, NSUI ಅಭ್ಯರ್ಥಿ ಅಭಿ ದಹಿಯಾ ಉಪಾಧ್ಯಕ್ಷ ಸ್ಥಾನವನ್ನು ಗೆದ್ದಿದ್ದಾರೆ. ಶುಕ್ರವಾರ ವಿದ್ಯಾರ್ಥಿ ಸಂಘದ ಚುನಾವಣೆ […]