ದುಬೈ: ದಸರಾದಂದು ಸಾರ್ವಜನಿಕರಿಗೆ ಮುಕ್ತವಾದ ಭವ್ಯ ಹಿಂದೂ ದೇವಾಲಯ
ದುಬೈ: ಇಲ್ಲಿನ ‘ಪೂಜಾ ಗ್ರಾಮ’ ಜೆಬೆಲ್ ಅಲಿ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಉದ್ಘಾಟನೆಗೊಂಡ ಭವ್ಯವಾದ ಹಿಂದೂ ದೇವಾಲಯವು ದಸರಾ ಸಂದರ್ಭದಲ್ಲಿ ಭಕ್ತರಿಗೆ ಮುಕ್ತವಾಗಿದೆ. ಈ ದೇವಾಲಯವು ಯುಎಇಯ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾದ ಸಿಂಧಿ ಗುರು ದರ್ಬಾರ್ ದೇವಾಲಯದ ವಿಸ್ತರಣೆಯಾಗಿದೆ. ಸಹಿಷ್ಣುತೆ ಮತ್ತು ಸಹಬಾಳ್ವೆ ಸಚಿವ ಶೇಖ್ ನಹ್ಯಾನ್ ಬಿನ್ ಮುಬಾರಕ್ ಅಲ್ ನಹ್ಯಾನ್ ಅವರು ನೆಲಮಹಡಿಯಲ್ಲಿರುವ ದೇವಾಲಯದ ವಿವಿಧೋದ್ದೇಶ ಸಭಾಂಗಣದಲ್ಲಿ ದೀಪ ಬೆಳಗಿಸುವ ಮೂಲಕ ದೇವಾಲಯವನ್ನು ಉದ್ಘಾಟಿಸಿದರು. Amb @sunjaysudhir – It […]