ದುರ್ಗಾದೌಡ್ ನಲ್ಲಿ ತಲವಾರು ಪ್ರದರ್ಶನ, ಪ್ರಚೋದನಕಾರಿ ಭಾಷಣ: ಎರಡು ಪ್ರತ್ಯೇಕ ಪ್ರಕರಣ ದಾಖಲು
ಉಡುಪಿ: ನಗರದಲ್ಲಿ ಅಕ್ಟೋಬರ್ 2ರಂದು ಆಯೋಜಿಸಲಾಗಿದ್ದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಮತ್ತು ಸಾರ್ವಜನಿಕವಾಗಿ ಪ್ರಚೋದನಕಾರಿ ಭಾಷಣ ಮಾಡಿರುವ ವಿರುದ್ದ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ದುರ್ಗಾ ದೌಡ್ ದಿನದಂದು ಕಡಿಯಾಳಿಯಿಂದ ರಾಜಾಂಗಣದವರೆಗೆ ಮೆರವಣಿಗೆ ನಡೆದಿದ್ದು, ಅದರಲ್ಲಿ 10-15 ಮಂದಿಯ ಗುಂಪು ತಲವಾರು ಪ್ರದರ್ಶಿಸಿದ್ದು, ಇದರಿಂದ ಭಯ ಹುಟ್ಟುಹಾಕಲಾಗಿದೆ ಎಂದು ಹುಸೇನ್ ಎಂಬವರು ದೂರು ನೀಡಿದ್ದು, ಈ ಹಿನೆಲೆಯಲ್ಲಿ ಐ.ಎಫ್.ಸಿ 1860(ಯು/ಎಸ್ 143, 149) ಆರ್ಮ್ ಆಕ್ಟ್1959(ಯು/ಎಸ್-27) ಅಡಿಯಲ್ಲಿ ಪ್ರಕರಣ […]