ಅಜೆಂಡಾ ಭರಿತ ಅಕ್ಷರವನ್ನು ಅವಲೋಕಿಸದೆ ಅನುಸರಿಸುವುದು ಅಕ್ಷರಶಃ ಆತ್ಮಹತ್ಯೆ!: ದುರ್ಗಾ ಬರೆದ ಬರಹ

ದುರ್ಗಾ ಅಂ   ತರ್ಜಾಲ ಎಂಬ ವಿಸ್ಮಯವೊಂದು ಮನುಕುಲಕ್ಕೆ ಪಸರಿಸಿದ ನಂತರ ಜಗತ್ತು ಹಿಂದೆಂದೂ ಕಾಣದಷ್ಟು ಸಾಹಿತಿಗಳು, ಕವಿಗಳು, ಪ್ರೇರಕವಾಕ್ಯ ರಚನಕಾರರು, ವಿಮರ್ಶಕರು, ಟೀಕಾಕಾರರನ್ನು ಸೃಷ್ಟಿಸಿದ್ದು ಮತ್ತು ಅವರೆಲ್ಲರಿಗೂ ಖರ್ಚಿಲ್ಲದೆ ವೇದಿಕೆ ಒದಗಿಸಿಕೊಟ್ಟಿದ್ದು ಈ ಸಾಮಾಜಿಕ ಜಾಲತಾಣಗಳು! ಅಷ್ಟರಮಟ್ಟಿಗೆ ಜಾಲತಾಣಗಳ ಜನ್ಮ ನಿಜಕ್ಕೂ ತೃಪ್ತಿಕರ. ಇಂದು ಸೋಶಿಯಲ್ ಮೀಡಿಯ ಬಳಸುತ್ತಿರುವ ಎಲ್ಲರೂ ಕನಿಷ್ಠ ಅಕ್ಷರ ಟೈಪಿಸುವಷ್ಠಾದರೂ ವಿದ್ಯಾವಂತರೇ! ಹಾಗಾಗಿ ಇಲ್ಲಿ ಬರಹದ ವ್ಯಸನ ಹೊಂದಿರುವ ವರ್ಗವೊಂದು ಬಹು ದೊಡ್ಡ ಸಂಖ್ಯೆಯಲ್ಲಿದೆ. ಚುಟುಕಾದ ಪೋಸ್ಟುಗಳು ಮತ್ತು ವಿಶಾಲವಾದ ಕಮೆಂಟುಗಳೂ […]