ಮೈತ್ರಿ ಸರ್ಕಾರ ಉರುಳಿಸಲು ಡ್ರಗ್ಸ್ ದಂಧೆಯ ಹಣ ಬಳಕೆ: ಎಚ್ ಡಿಕೆ ಆರೋಪ
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಬೀಳಲು ಡ್ರಗ್ಸ್ ಮಾಫಿಯಾವೇ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಯತ್ನಿಸಿದ್ದೆ. ಇದುವೇ ನನ್ನ ಸರ್ಕಾರಕ್ಕೆ ಮುಳುವಾಯಿತು. ನನ್ನ ಸರ್ಕಾರ ಉರುಳಲು ಡ್ರಗ್ಸ್, ಕ್ರಿಕೆಟ್ ಬೆಟ್ಟಿಂಗ್ ಮತ್ತು ಪಬ್ ಹಣ ಬಳಕೆ ಆಯಿತು’ ಎಂದು ಆರೋಪಿಸಿದ್ದಾರೆ. ಡ್ರಗ್ಸ್ ಮಾಫಿಯಾ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.