ನ. 22 ರಿಂದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ; 12 ದಿನಗಳಲ್ಲಿ 12 ತಂಡಗಳಿಂದ ನಾಟಕ ಪ್ರದರ್ಶನ

ಉಡುಪಿ: ರಂಗಭೂಮಿ ಉಡುಪಿ ಇದರ ವತಿಯಿಂದ 44ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ ನವೆಂಬರ್ 22ರಿಂದ ಡಿಸೆಂಬರ್ 3 ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನ.22ರಂದು ಸಂಜೆ 6 ಗಂಟೆಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ್ ನಾಟಕ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ ಎಂದರು. ರಂಗಭೂಮಿಯ ಗೌರವಾಧ್ಯಕ್ಷ ಡಾ. ಎಚ್‌.ಎಸ್‌ ಬಲ್ಲಾಳ್ ಅಧ್ಯಕ್ಷತೆ […]

ರಂಗಭೂಮಿ ಉಡುಪಿಯ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆ

ಉಡುಪಿ: ಗುರುವಾರದಂದು ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆ ರಂಗಭೂಮಿ ಉಡುಪಿಯ 58ನೇ ವಾರ್ಷಿಕ ಮಹಾಸಭೆ ನಡೆಯಿತು. 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಗೊಂಡರು. ಸಂಸ್ಥೆಯ ಗೌರವಾಧ್ಯಕ್ಷರಾಗಿ ಡಾ. ಎಚ್​. ಎಸ್​ ಬಲ್ಲಾಳ್​, ಮಾರ್ಗದರ್ಶಕರಾಗಿ ಡಾ. ಎಚ್​. ಶಾಂತರಾಮ್​, ಉಪಾಧ್ಯಕ್ಷರಾಗಿ ಭಾಸ್ಕರ್​ ರಾವ್​ ಕಿದಿಯೂರು ಹಾಗೂ ಎನ್​. ರಾಜ ಗೋಪಾಲ ಬಲ್ಲಾಳ್​, ಪ್ರಧಾನ ಕಾರ್ಯದರ್ಶಿಯಾಗಿ ಪ್ರದಿಪ್​ ಚಂದ್ರ ಕುತ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ […]

ಡಾ. ತಲ್ಲೂರು ಶಿವರಾಮ ಶೆಟ್ಟಿಯವರ ನಿತ್ಯಸತ್ಯ-ಬಾಳಿಗೆ ಬೆಳಕು ಕೃತಿ ಲೋಕಾರ್ಪಣೆ

ಉಡುಪಿ: ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ, ರಂಗಭೂಮಿ ಉಡುಪಿ ಸಂಸ್ಥೆಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅವರ `ನಿತ್ಯ ಸತ್ಯ-ಬಾಳಿಗೆ ಬೆಳಕು’ ಕೃತಿಯನ್ನು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅವರು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ ರಂಗಭೂಮಿ ಉಡುಪಿಯ ಎರಡನೇ ದಿನದ ರಂಗೋತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಾವು ಪರಂಪರೆಯ ಕೊಂಡಿಯನ್ನು ಕಳಚಿಕೊಳ್ಳುತ್ತಿದ್ದೇವೆ. ಜೀವನದಲ್ಲಿ ನೆಮ್ಮದಿ ಕಡಿಮೆಯಾಗುತ್ತಿದೆ. ಹೀಗಾಗಿ ಬದುಕಿಗೆ ದಾರಿ ದೀಪವಾಗಬಲ್ಲ ಭಗವದ್ಗೀತೆ, ಡಿವಿಜಿ […]

ತಲ್ಲೂರು ಶಿವರಾಮ್ ಶೆಟ್ಟಿ ಇವರಿಗೆ ಕರ್ನಾಟಕ ಜಾನಪದ ವಿವಿ ಗೌರವ ಡಾಕ್ಟರೇಟ್

ಉಡುಪಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರದ ಜಾನಪದ ಕಲಾವಿದ ಕೆಂಚಪ್ಪ ನಾಗರಾಜಿ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜೀವನ್ ರಾಮ್, ಉಡುಪಿಯ ಯಕ್ಷಗಾನ ಕಲಾವಿದ ತಲ್ಲೂರು ಶಿವರಾಮ ಶೆಟ್ಟಿ, ಹುಬ್ಬಳ್ಳಿಯ ರಂಗಕರ್ಮಿ ಯಶವಂತ ಸರದೇಶಪಾಂಡೆ,ಗದಗ ಜಿಲ್ಲೆಯ ಗಂಗಿಮಾದಿನಗರದ ಬಸವರಾಜ ಕೆಂಚಿಗೇರಿ ವೆಂಕಪ್ಪ ಅಂಬಾಜಿ ಸುಗೇಟ್ಕರ್ (ಬಾಗಲಕೋಟ ಜಿಲ್ಲೆ), ಇವರಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದೆ ಎಂದು ವಿವಿ ಉಪಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಸೋಮವಾರದಂದು ತಿಳಿಸಿದ್ದಾರೆ. ಡಾ.ತಲ್ಲೂರು ಶಿವರಾಮ ಶೆಟ್ಟಿ ಇವರು ಪ್ರಸ್ತುತ […]