ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ರಾಷ್ಟ್ರವ್ಯಾಪಿ CPR ತಂತ್ರ ಕಲಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯುವ ಜನತೆ ಸೇರಿದಂತೆ ವಯಸ್ಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಷ್ಟ್ರವ್ಯಾಪಿ CPR ತಂತ್ರವನ್ನು ಕಲಿಸುವ ಅಭಿಯಾನವನ್ನು ಪ್ರಾರಂಭಿಸಿದೆ. ಕಾರ್ಡಿಯೋಪಲ್ಮನರಿ ಪುನರುಜ್ಜೀವನವನ್ನು CPR ಎಂದೂ ಕರೆಯುತ್ತಾರೆ. ಇದು ವ್ಯಕ್ತಿಯ ಹೃದಯ ಬಡಿತ ಅಥವಾ ಉಸಿರಾಟ ನಿಂತಾಗ ಮಾಡುವ ತುರ್ತು ಜೀವ ಉಳಿಸುವ ವಿಧಾನವಾಗಿದೆ. CPR ದೇಹದ ಪ್ರಮುಖ ಅಂಗಗಳಿಗೆ ರಕ್ತದ ಹರಿವು ಮತ್ತು ಆಮ್ಲಜನಕೀಕರಣವನ್ನು ನಿರ್ವಹಿಸಲು ಎದೆಯ ಸಂಕೋಚನ ಮತ್ತು ಕೃತಕ ಉಸಿರಾಟದ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಡಿಸೆಂಬರ್ […]

ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ತೀವ್ರ ಕೋವಿಡ್ ನಿಂದ ಬಳಲಿದವರು ಶ್ರಮದಾಯಕ ವ್ಯಾಯಾಮದಿಂದ ದೂರವಿರಲು ಸೂಚನೆ

ನವದೆಹಲಿ: ಇತ್ತೀಚಿನ ತಿಂಗಳುಗಳಲ್ಲಿ ಯುವಜನರಲ್ಲಿ ಹೃದಯಾಘಾತ ಹೆಚ್ಚುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರು ತೀವ್ರವಾದ ಕೋವಿಡ್ -19 ಸೋಂಕಿನಿಂದ ಬಳಲಿದ್ದವರು ವ್ಯಾಯಾಮ ಮಾಡುವಾಗ ಹೆಚ್ಚು ಶ್ರಮಪಡಬಾರದು ಮತ್ತು ಸ್ವಲ್ಪ ಸಮಯದವರೆಗೆ ಕಠಿಣ ಪರಿಶ್ರಮದಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಗುಜರಾತ್‌ನ ಭಾವನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಂಡವಿಯಾ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ವಿಷಯದ ಬಗ್ಗೆ […]

ಇನ್ನು ಮುಂದೆ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೂ ಜನೌಷಧಿ ಕೇಂದ್ರ ತೆರೆಯಲು ಅನುಮತಿ: ಕೇಂದ್ರ ಸಹಕಾರ ಸಚಿವಾಲಯದ ನಿರ್ಧಾರ

ಬೆಂಗಳೂರು: ದೇಶಾದ್ಯಂತ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು ತೆರೆಯಲು 2,000 ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಹಕಾರ ಸಚಿವಾಲಯ ಮಂಗಳವಾರ ತಿಳಿಸಿದೆ. ಇದರಂತೆ ಆಗಸ್ಟ್ ವರೆಗೆ ಸುಮಾರು 1,000 ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು. ಉಳಿದ 1,000 ಕೇಂದ್ರಗಳನ್ನು ಈ ವರ್ಷದ ಡಿಸೆಂಬರ್ ವರೆಗೆ ತೆರೆಯಲಾಗುವುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಸಹಕಾರ ಸಚಿವ ಅಮಿತ್ ಶಾ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಎಸ್ ಮಾಂಡವಿಯಾ […]

ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಿಂದ ಜಗನ್ನಾಥ ಭವನ ಭೇಟಿ

ಬೆಂಗಳೂರು: ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನಕ್ಕೆ ಇಂದು ಕರ್ನಾಟಕದ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿಗಳಾದ ಮನ್ ಸುಖ್ ಮಾಂಡವೀಯ ಹಾಗೂ ಕೆ. ಅಣ್ಣಾಮಲೈ ಭೇಟಿ ನೀಡಿ, ಭಾರತ ಮಾತೆಯ ಭಾವಚಿತ್ರಕ್ಕೆ ಹಾಗೂ ಜಗನ್ನಾಥ್ ರಾವ್ ಜೋಷಿ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಜಿ.ವಿ ಮುಂತಾದವರು ಉಪಸ್ಥಿತರಿದ್ದರು.  

ಕೇಂದ್ರ ಸರಕಾರದಿಂದ “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಯೋಜನೆ: ಮನ್ ಸುಖ್ ಮಾಂಡವೀಯಾ

ನವದೆಹಲಿ: ಡಯಾಲಿಸಿಸ್‌ಗೆ ಒಳಗಾಗುವ ರೋಗಿಗಳು ಯಾವುದೇ ಸಮಯದಲ್ಲಿ ದೇಶದಲ್ಲಿ ಎಲ್ಲಿ ಬೇಕಾದರೂ ಚಿಕಿತ್ಸೆಗೊಳಗಾಗಲು ಕೇಂದ್ರ ಸಾರಕಾರವು “ಒಂದು ರಾಷ್ಟ್ರ, ಒಂದು ಡಯಾಲಿಸಿಸ್” ಕಾರ್ಯಕ್ರಮವನ್ನು ಹೊರತರಲಿದೆ ಎಂದು ಆರೋಗ್ಯ ಸಚಿವ ಡಾ.ಮನ್ ಸುಖ್ ಮಾಂಡವಿಯಾ ಹೇಳಿದ್ದಾರೆ. ಮರೀನಾ ಬೀಚ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಮಿಷನ್ ಆಯೋಜಿಸಿದ್ದ ಸೈಕಲ್ ರಾಲಿಯಲ್ಲಿ ಡಾ ಮನ್ಸುಖ್ ಮಾಂಡವಿಯಾ ಭಾಗವಹಿಸಿದ್ದರು. ಆಬಳಿಕ ನಗರದ ತಮಿಳುನಾಡು ಸರಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ರೊಬೊಟಿಕ್ ಸರ್ಜರಿ ಸೌಲಭ್ಯ ಮತ್ತು ಆರಂಭಿಕ ಗರ್ಭಧಾರಣೆಯ ಅಸಂಗತತೆಗಳ ತಪಾಸಣೆ ಕೇಂದ್ರವನ್ನು ಅವರು […]