ಹಿಮಾಲಕ್ಕೂ ಹಳೆಯದಾದ ಪಶ್ಚಿಮ ಘಟ್ಟಗಳನ್ನು ರಕ್ಷಿಸುವುದು ಅವಶ್ಯ: ಡಾ.ವಿವೇಕ್ ಪಂಡಿ

ಮಣಿಪಾಲ: ಇಂದು ನಾವು ಪರಿಸರ ಸುಸ್ಥಿರತೆಯ ದೃಷ್ಟಿಯಿಂದ ಯೋಚಿಸದೆ, ಕೇವಲ ಆರ್ಥಿಕ ಸುಸ್ಥಿರತೆಯ ದೃಷ್ಟಿಯಿಂದ ಮಾತ್ರ ಯೋಚಿಸುತ್ತಿರುವುದು ದುರದೃಷ್ಟಕರ ವಿಚಾರ. ಹಿಮಾಲಯಕ್ಕಿಂತ ಹಳೆಯದಾದ ಪಶ್ಚಿಮ ಘಟ್ಟಗಳು ಈಗಾಗಲೇ ಜೀವೈವಿಧ್ಯವನ್ನು ಕಳೆದುಕೊಂಡು ಅಪಾರ ಹಾನಿಯನ್ನು ಅನುಭವಿಸಿವೆ ಹಾಗಾಗಿ ಇದನ್ನು ‘ಹಾಟ್‌ಸ್ಪಾಟ್‌’ ಎಂದು ಗುರುತಿಸಲಾಗಿದೆ. ಇಲ್ಲಿ ಜೀವವೈವಿಧ್ಯಗಳ ನಡುವೆ ಕ್ಲಿಷ್ಟ ಮತ್ತು ಸೂಕ್ಷ್ಮವಾದ ಪರಿಸರ ಜಾಲವಿದೆ. ಇದನ್ನು ಎಲ್ಲಾ ರೀತಿಯ ಆಕ್ರಮಣಗಳಿಂದ ರಕ್ಷಿಸಬೇಕಾಗಿದೆ ಎಂದು ಮಾಹೆಯ ಪರಿಸರಶಾಸ್ತ್ರಜ್ಞ ಡಾ.ವಿವೇಕ್ ಪಂಡಿ ನುಡಿದರು. ಅವರು ಶನಿವಾರ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ […]