ಮೂಡಬಿದ್ರೆಯ ಕೃಷಿ ವಿಜ್ಞಾನಿ ಡಾ ಎಲ್ ಸಿ ಸೋನ್ಸ್ ನಿಧನ

ಮೂಡಬಿದ್ರೆ: ಮೂಡುಬಿದಿರೆ ಸಮೀಪದ ಸೋನ್ಸ್ ಫಾರಂನ ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನಿ ಡಾ.ಎಲ್.ಸಿ.ಸೋನ್ಸ್ ಬುಧವಾರದಂದು ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಮತ್ತು ಸಹೋದರ ಐ ವಿ ಸೋನ್ಸ್ ಅವರನ್ನು ಅಗಲಿದ್ದಾರೆ. ಡಾ ಸೋನ್ಸ್ 1966 ರಲ್ಲಿ ಮೊಂಟಾನಾ ವಿಶ್ವವಿದ್ಯಾಲಯದಿಂದ ತಮ್ಮ ಪಿಎಚ್‌ಡಿ ಪಡೆದಿದ್ದರು. ಸುಮಾರು ನಾಲ್ಕೈದು ದಶಕಗಳ ಕಾಲದಿಂದಲೂ ಮೂಡಬಿದ್ರೆಯ ತಮ್ಮ ಸ್ವಂತ ಜಮೀನಿನಲ್ಲಿ ಹಲವು ಬಗೆಯ ವಿದೇಶಿ ಹಣ್ಣುಗಳನ್ನು ಬೆಳೆದು ಪ್ರಖ್ಯಾತಿ ಹೊಂದಿದ್ದರು. ಹಣ್ಣುಗಳಲ್ಲಿ […]