ದೇಶದ ಎರಡನೆ ಮತ್ತು ಕರ್ನಾಟಕದ ಮೊದಲನೆ ಕತ್ತೆ ಫಾರ್ಮ್ ದಕ್ಷಿಣ ಕನ್ನಡದಲ್ಲಿ ಆರಂಭ: ಟೆಕ್ಕಿ ಕೆಲಸ ಬಿಟ್ಟು ಕೃಷಿಕನಾದ ಶ್ರೀನಿವಾಸ್ ಗೌಡ ಸಾಧನೆ

ಬಂಟ್ವಾಳ: 42 ವರ್ಷದ ಶ್ರೀನಿವಾಸ್ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕತ್ತೆ ಸಾಕಣೆ ಆರಂಭಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಜೂನ್ 8 ರಂದು ಪ್ರಾರಂಭವಾದ ಈ ಫಾರ್ಮ್ ಕರ್ನಾಟಕದಲ್ಲಿ ಮೊದಲನೆಯದು ಮತ್ತು ದೇಶದಲ್ಲೇ ಎರಡನೆಯದು. ಇಂತಹ ಕತ್ತೆ ಸಾಕಣೆ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮಾತ್ರ ಇದೆ. ತಿರಸ್ಕರಿಸಲಾದ ಮತ್ತು ಕಡಿಮೆ ಮೌಲ್ಯದ ಕತ್ತೆಗಳ ದುರವಸ್ಥೆ ನೋಡಿ ಮನನೊಂದು ಕತ್ತೆ ಸಾಕಣೆ ಫಾರ್ಮ್ ಪ್ರಾರಂಭಿಸಿದೆ ಎಂದು ತೋಟದ ಮಾಲೀಕ ಶ್ರೀನಿವಾಸ್ ಗೌಡ ಹೇಳುತ್ತಾರೆ. ಬಿಇ ಪದವೀಧರರಾಗಿರುವ […]