ನ. 5 ರಿಂದ 7 ರವರೆಗೆ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದಲ್ಲಿ ಸಸ್ಯ ಸಂತೆ
ದೊಡ್ಡಣಗುಡ್ಡೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 5 ರಿಂದ 7 ರ ವರೆಗೆ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಸಸ್ಯ ಸಂತೆ-2022 ನಡೆಯಲಿದೆ. ಸದರಿ ಸಸ್ಯ ಸಂತೆಯಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ನರ್ಸರಿಗಳಿಗೆ ಮತ್ತು ವಿವಿಧ ತೋಟಗಾರಿಕೆ ಬೆಳೆಗಳ ಬೀಜ ಮಾರಾಟಗಾರರಿಗೆ ಕಸಿ/ಸಸಿ ಗಿಡಗಳನ್ನು, ಬೀಜಗಳನ್ನು, ನರ್ಸರಿ […]
ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ: ಭಕ್ತರಿಂದ ಕಾಣಿಕೆ ನೀಡಲಾದ ಬೆಳ್ಳಿ ಕಿರೀಟದಲ್ಲಿ ಸರ್ವಾಲಂಕಾರ ಭೂಷಿತಳಾಗಿ ಕಂಗೊಳಿಸಿದ ದುರ್ಗಾ ದೇವಿ
ಮಣಿಪಾಲ: ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆ, ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ದೇವಿಯು ಶ್ರಾವಣ ಶುಕ್ರವಾರದಂದು ಮಣಿಪಾಲದ ಉದ್ಯಮಿ ರಾಜೇಶ್ ಮತ್ತು ಶ್ರೀಮತಿ ಪದ್ಮಿನಿ ರಾಜೇಶ್ ಕಾಣಿಕೆ ರೂಪದಲ್ಲಿ ಅರ್ಪಿಸಿದ ಬೆಳ್ಳಿಯ ಕೀರಿಟವನ್ನು ಧರಿಸಿ ಸರ್ವಾಲಂಕಾರ ಭೂಷಿತಳಾಗಿ ಪೂಜೆಯನ್ನು ಸ್ವೀಕರಿಸಿ ಭಕ್ತರನ್ನು ಅನುಗ್ರಹಿಸಿದಳು. ಕ್ಷೇತ್ರದಲ್ಲಿ ಶುಕ್ರವಾರ ಬೆಳಗ್ಗೆ ನೆರವೇರಿದ ಸಂಜೀವಿನಿ ಮೃತ್ಯುಂಜಯ ಯಾಗ, ಸಂಜೆ ನೆರವೇರಿದ ಶ್ರೀ ದುರ್ಗಾ ನಮಸ್ಕಾರ ಪೂಜೆಯ ದೃಶ್ಯಾವಳಿಗಳು
ಜೂನ್ 17 ರಿಂದ 19 ರ ವರೆಗೆ ಹಲಸು, ಜೇನು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಲಸು ಹಾಗೂ ಜೇನು ಪ್ರದರ್ಶನ ಮತ್ತು ಮಾರಾಟ ಮೇಳವು ಜೂನ್ 17 ರಿಂದ 19 ರ ವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರ ಇಲ್ಲಿನ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯಲಿದೆ. ಮೇಳದಲ್ಲಿ ಹಲಸಿನ ವಿವಿಧ ತಳಿಗಳು, ಹಲಸಿನ ಆಹಾರ ಉತ್ಪನ್ನಗಳು ಹಾಗೂ ಮೌಲ್ಯ ವರ್ಧಿತ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಜೇನು ಪ್ರದರ್ಶನ […]