ಕೆಜಿಎಫ್ ಬ್ಯಾನರ್, ಲೂಸಿಯಾ ಡೈರೆಕ್ಟರ್ ಜೊತೆಗೂಡಿದ ಫಹಾದ್ ಫಾಸಿಲ್: ಅ.9 ರಂದು ಸೆಟ್ಟೇರಲಿದೆ ‘ಧೂಮಮ್’

ಕೆಜಿಎಫ್ ಸರಣಿಯ ಭರ್ಜರಿ ಯಶಸ್ಸಿನ ನಂತರ, ಫಹದ್ ಫಾಸಿಲ್ ನಾಯಕರಾಗಿ ‘ಧೂಮಮ್’ ಎಂಬ ಹೊಸ ಚಲನಚಿತ್ರವನ್ನು ನಿರ್ಮಿಸುವ ಬಗ್ಗೆ ಹೊಂಬಾಳೆ ಫಿಲಂಸ್ ಟ್ವಿಟರ್ ನಲ್ಲಿ ಘೋಷಿಸಿದೆ. ಹೊಂಬಾಳೆ ಫಿಲಂಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಧೂಮಮ್ ಚಿತ್ರದ ಮೊದಲ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರವನ್ನು ಈ ಹಿಂದೆ ಲೂಸಿಯಾ ಮತ್ತು ಯು-ಟರ್ನ್ ಚಿತ್ರಗಳನ್ನು ಬರೆದು, ನಿರ್ದೇಶಿಸಿದ್ದ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಧೂಮಮ್ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. […]