ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀಮ೦ಜುನಾಥ ಸ್ವಾಮಿಯ ಆಲಯದಲ್ಲಿ ಲಕ್ಷದೀಪೋತ್ಸವದ ಸಂಭ್ರಮ

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳ ಶ್ರೀಮ೦ಜುನಾಥ ಸ್ವಾಮಿ ದೇವಾಲಯದಲ್ಲಿ ಐದು ದಿನಗಳ ಕಾಲ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಶನಿವಾರದ೦ದು ಚಾಲನೆ ನೀಡಲಾಗಿದೆ. ಶನಿವಾರದಂದು ಬೆಳಿಗ್ಗೆ ಶ್ರೀಮ೦ಜುನಾಥೇಶ್ವರ ಪ್ರೌಢಶಾಲೆಯ ಕ್ರೀಡಾ೦ಗಣದಲ್ಲಿ ಏರ್ಪಡಿಸಲಾದ ವಸ್ತುಪ್ರದರ್ಶನವನ್ನು ಬೆಳ್ತ೦ಗಡಿಯ ಶಾಸಕ ಹರೀಶ್ ಪೂ೦ಜ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇ೦ದ್ರ ಹೆಗ್ಡೆಯವರು ಉದ್ಘಾಟಿಸಿದ್ದರು. ಸೋಮವಾರದಂದು ದೇವಾಲಯ ಮತ್ತು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಗೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ(ಬೈರತಿ) ಶಂಕುಸ್ಥಾಪನೆ ನೆರವೇರಿಸಿದ್ದಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲಕ್ಷದೀಪೋತ್ಸವವನ್ನು ಆಚರಿಸಲಾಗುತ್ತಿದ್ದು, ಭಕ್ತರು ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದೇವಸ್ಥಾನದ ಮುಖ್ಯದ್ವಾರವನ್ನು […]

ಉಜಿರೆ ಎಸ್‌ ಡಿ ಎಂ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ.ಬಿ.ಯಶೋವರ್ಮ ಇನ್ನಿಲ್ಲ!

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ತಮ್ಮ ದೂರದರ್ಶಿ ಕಾರ್ಯಕ್ರಮಗಳ ಮೂಲಕ ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಯಶಸ್ಸಿನಲ್ಲಿ ಪ್ರಮಖ ಪಾತ್ರ ವಹಿಸಿದ್ದ ಡಾ.ಬಿ.ಯಶೋವರ್ಮ ದೀರ್ಘಕಾಲದ ಅನಾರೋಗ್ಯದಿಂದಾಗಿ ಸೋಮವಾರ ನಿಧನರಾಗಿದ್ದಾರೆ. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ತಿಂಗಳಿನಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 66 ವರ್ಷದ ಯಶೋವರ್ಮ ಅವರು ಭಾನುವಾರ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ನಿಧರಾಗಿದ್ದಾರೆ. ಡಾ. ಬಿ.ಯಶೋವರ್ಮ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ […]

ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ

ಬೆಳ್ತಂಗಡಿ: ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಪ್ಯಾಕೇಜಿಂಗ್ ಮತ್ತು ಫಿನಿಷಿಂಗ್ ಹಾಗೂ ಸ್ಟಿಚ್ಚಿಂಗ್ ವಿಭಾಗದಲ್ಲಿ ಕೆಲಸಕ್ಕೆ ಮಹಿಳಾ ಸದಸ್ಯರು ಬೇಕಾಗಿದ್ದು ಯಾವುದೇ ಅನುಭವದ ಇಲ್ಲದ ಆಸಕ್ತ ಸದಸ್ಯರಿಗೆ ಮುಕ್ತ ಅವಕಾಶವಿದೆ. ದೂರದ ಊರಿಂದ ಬರುವ ಸದಸ್ಯರಿಗೆ ಉಚಿತ ವಸತಿ ಸೌಲಭ್ಯವಿದೆ.ಆಕರ್ಷಕ ವೇತನ ಹಾಗೂ ಪಿ.ಎಫ್ ಮತ್ತು ಇ ಎಸ್ ಐ ಸೌಲಭ್ಯಗಳನ್ನು ನೀಡಲಾಗುವುದು. (ವೇತನ ಶ್ರೇಣಿ 6000ರಿಂದ 9500ರ ವರೆಗೆ ನೀಡಲಾಗುವುದು) ನೇರವಾಗಿ ಭೇಟಿ ಕೊಡಿ. ಸಿರಿ ಗ್ರಾಮೋದ್ಯೋಗ ಸಂಸ್ಥೆ, ಟಿ. ಬಿ ಕ್ರಾಸ್ ಹತ್ತಿರ ಉಜಿರೆ – […]