ಧರ್ಮಸ್ಥಳ ದೇವರ ದರ್ಶನಕ್ಕೆ ಹೋಗುವವರು ಇಲ್ಲಿ ಗಮನಿಸಿ: ಈ ಆರು ದಿನಗಳು ದರ್ಶನಕ್ಕೆ ಸಮಯ ನಿಗದಿ

ಧರ್ಮಸ್ಥಳ: ಶ್ರೀ ಮಂಜುನಾಥ ನೆಲೆಸಿರುವ ಕ್ಷೇತ್ರ ಧರ್ಮಸ್ಥಳದಲ್ಲಿ 2026ರ ಸಾಲಿನ ‘ಕಾಲಾವಧಿ ಜಾತ್ರೆ’ಗೆ ಕ್ಷಣಗಣನೆ ಆರಂಭವಾಗಿದೆ. ಏಪ್ರಿಲ್ 13ರಿಂದ ಏಪ್ರಿಲ್ 23ರವರೆಗೆ ನಡೆಯಲಿರುವ ಈ ವೈಭವದ ಉತ್ಸವದ ಸಂಪೂರ್ಣ ವೇಳಾಪಟ್ಟಿಯನ್ನು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಭಕ್ತಾದಿಗಳು ತಮ್ಮ ಪ್ರಯಾಣ ಹಾಗೂ ದರ್ಶನವನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಅವಕಾಶ ದೊರೆತಿದೆ. ಜಾತ್ರಾ ಮಹೋತ್ಸವದ ಅವಧಿಯಲ್ಲಿ ದೇವರ ದರ್ಶನ ಸಮಯದಲ್ಲೂ ಕೆಲ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಭಕ್ತರಿಗೆ ಅದನ್ನು ಗಮನಿಸುವಂತೆ ಸೂಚಿಸಲಾಗಿದೆ. ಏಪ್ರಿಲ್ 13ರಂದು ಆರಂಭೋತ್ಸವ ಜಾತ್ರೆಯು […]
ಧರ್ಮಸ್ಥಳ : ಕಾರು ಹಾಗೂ ಜೀಪ್ ಮಧ್ಯೆ ಅಪಘಾತ; ನಾಲ್ವರಿಗೆ ಗಂಭೀರ ಗಾಯ

ಧರ್ಮಸ್ಥಳ: ಕಾರು ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಹೋಗುತ್ತಿದ್ದ ಜೀಪ್ ಹಾಗೂ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಬಿಳಿನೆಲೆ ಸೇತುವೆಯ ಸಮೀಪ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಜೀಪಿನಲ್ಲಿದ್ದ ಇಬ್ಬರು ಹಾಗೂ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.