ಹೊಸ ಅವತಾರದಲ್ಲಿ ಸುನೀಲ್ ಶೆಟ್ಟಿ: ಧಾರಾವಿ ಬ್ಯಾಂಕ್ ಒಟಿಟಿ ಸರಣಿಯಲ್ಲಿ ‘ತಲೈವನ್’ ಆದ ಬಾಲಿವುಡ್ ನ ಅಣ್ಣ!
ಬಾಲಿವುಡ್ ನಲ್ಲಿ “ಅಣ್ಣ” ಎಂದೇ ಪ್ರಖ್ಯಾತರಾದ ಸುನಿಲ್ ಶೆಟ್ಟಿಯವರು ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸುನೀಲ್ ಶೆಟ್ಟಿ ಅವರು ಎಂಎಕ್ಸ್ ಪ್ಲೇಯರ್ ಒಟಿಟಿಯಲ್ಲಿ ‘ಧಾರಾವಿ ಬ್ಯಾಂಕ್’ ಸರಣಿಯೊಂದಿಗೆ ಡಿಜಿಟಲ್ ಕ್ಷೇತ್ರಕ್ಕೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಈ ಸರಣಿಯನ್ನು ಸಮಿತ್ ಕಕ್ಕಡ್ ಅವರು ನಿರ್ದೇಶಿಸಿದ್ದಾರೆ. ಧಾರಾವಿ ಬ್ಯಾಂಕ್ ಸರಣಿಯಲ್ಲಿ ಸುನಿಲ್ ‘ತಲೈವನ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ವಿವೇಕ್ ಒಬೆರಾಯ್ ಕೂಡಾ ನಟಿಸಲಿದ್ದಾರೆ. ನಟಿ ಸೋನಾಲಿ ಕುಲಕರ್ಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಧಾರಾವಿ […]