ಮುನಿಯಾಲು ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಟ್ರಸ್ಟ್: ದೇಸಿ ಗೋವುಗಳ ಹಾಲಿನ ಉತ್ಪನ್ನ ಬಿಡುಗಡೆ
ಕಾರ್ಕಳ: ತಾಲೂಕಿನ ಮುನಿಯಾಲಿನ ಸಂಜೀವಿನಿ ಫಾರ್ಮ್ಸ್ ಮತ್ತು ಡೈರಿ ಟ್ರಸ್ಟ್ ನಲ್ಲಿ ದೇಸಿ ಗೋವುಗಳ ಹಾಲಿನ ಉತ್ಪನ್ನಗಳ ಬಿಡುಗಡೆ ಸಮಾರಂಭ ಭಾನುವಾರ ನಡೆಯಿತು. ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಮತ್ತು ಸಿ.ಇ.ಓ ಎಮ್.ಎಸ್. ಮಹಾಬಲೇಶ್ವರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವರು ಗೋವಿನೊಳಗೆ ನೆಲೆಸಿದ್ದಾನೆ, ಹೀಗಾಗಿ ನಾನು ಅವುಗಳ ಮಧ್ಯೆಯೇ ವಾಸಿಸುತ್ತೇನೆ ಎಂದು ಶ್ರೀಕೃಷ್ಣ ಪರಮಾತ್ಮ ಗೀತಾ ಶ್ಲೋಕದ ಮೂಲಕ ತಿಳಿಸಿದ್ದಾನೆ. ಆಧುನಿಕತೆಗೆ ಒಡ್ಡಿಕೊಳ್ಳುತ್ತಿರುವ ಇಂದಿನ ಸಮಾಜದಲ್ಲಿ ರಾಮಕೃಷ್ಣ ಆಚಾರ್ ಮತ್ತು ಸವಿತಾ ಆಚಾರ್ ರವರು ನಡೆಸುತ್ತಿರುವ ಗೋಧಾಮ […]