ಬೆಳೆ ವಿಮಾ ಮೊತ್ತ ಪಾವತಿ ಬಾಕಿಯಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ: ತೋಟಗಾರಿಕಾ ಇಲಾಖೆ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಹವಾಮಾನಾಧಾರಿತ ಬೆಳೆವಿಮೆ ಯೋಜನೆಯಡಿ ಪ್ರಸಕ್ತ ಸಾಲಿನ ಅಕ್ಟೋಬರ್ 31 ರಿಂದ ಅಗ್ರಿಕಲ್ಚರ್ ಇನ್ಸೂರೆನ್ಸ್ ವಿಮಾ ಕಂಪನಿಯ ವತಿಯಿಂದ ರೈತರ ಖಾತೆಗೆ ಕ್ಲೇಮ್ ಮೊತ್ತವು ಜಮೆ ಆಗುತ್ತಿದ್ದು, ಬೈಂದೂರು ತಾಲೂಕಿನಲ್ಲಿ ವಿಮೆ ಮಾಡಿಸಿದ 9 ಗ್ರಾಮ ಪಂಚಾಯತ್‌ನ 1114 ರೈತ ವಿಮಾ ಪ್ರಕರಣಗಳಿಗೆ ರೂ. 113,87,406 (1 ಕೋಟಿ 13 ಲಕ್ಷ), ಹೆಬ್ರಿ ತಾಲೂಕಿನ ಬೆಳ್ವೆ ಮತ್ತು ಮಡಾಮಕ್ಕಿ ಗ್ರಾಮಗಳ 48 ರೈತರ ವಿಮಾ ಪ್ರಕರಣಗಳಿಗೆ ರೂ. 17,35,077(17.35 ಲಕ್ಷ), ಕುಂದಾಪುರ ತಾಲೂಕಿನ […]

ತೋಟಗಾರಿಕಾ ಆಸಕ್ತರ ಗಮನ ಸೆಳೆಯುತ್ತಿದೆ ರಂಗುಬಿರಂಗಿ ಹೂಗಿಡಗಳ ಸಸ್ಯಸಂತೆ

ಉಡುಪಿ: ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆ ಆವರಣದಲ್ಲಿ ನ.5 ರಿಂದ 7 ರ ವರೆಗೆ ನಡೆಯುವ ಸಸ್ಯಸಂತೆ ಕಾರ್ಯಕ್ರಮದಲ್ಲಿ 40 ಕ್ಕೂ ಅಧಿಕ ಜಾತಿಯ ಅಲಂಕಾರಿಕಾ ಸಸ್ಯಗಳು, 15 ಕ್ಕೂ ಅಧಿಕ ಜಾತಿಯ ಹಣ್ಣಿನ ಸಸ್ಯಗಳು, ತೆಂಗು, ಕಾಳು ಮೆಣಸಿನ ಸಸಿಗಳು, 50 ಕ್ಕೂ ಹೆಚ್ಚು ತರಕಾರಿ ಮತ್ತು ಹಣ್ಣಿನ ಬೀಜಗಳ ಮಾರಾಟ ಕೃಷಿ ಮತ್ತು ತೋಟಗಾರಿಕಾ ಆಸಕ್ತರನ್ನು ಗಮನ ಸೆಳೆಯುತ್ತಿದೆ. ತೋಟಗಾರಿಕಾ ಇಲಾಖೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಖಾಸಗಿ ಮತ್ತು ಸರ್ಕಾರಿ ನರ್ಸರಿಗಳಲ್ಲಿ ಬೆಳೆಸಿರುವ […]

ಜೇನುಗಾರಿಕಾ ತರಬೇತಿಗೆ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ನವೆಂಬರ್ 14 ರಿಂದ 2023 ಫೆಬ್ರವರಿ 15 ರ ವರೆಗೆ ನಡೆಯಲಿರುವ 3 ತಿಂಗಳ ಜೇನುಗಾರಿಕೆ ತರಬೇತಿಗೆ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರುವ, 18 ರಿಂದ 35 ವರ್ಷ ವಯಸ್ಸಿನ ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ತರಬೇತಿ ಬಯಸುವ ಅಭ್ಯರ್ಥಿಯ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು, ಸ್ವಂತ ಸಾಗುವಳಿ ಮಾಡುತ್ತಿರಬೇಕು. ಅರ್ಜಿ ಸಲ್ಲಿಸಲು ನವೆಂಬರ್ 5 ಕೊನೆಯ ದಿನ. […]