ಬದಿಯಡ್ಕದಿಂದ ನಾಪತ್ತೆಯಾಗಿದ್ದ ದಂತ ವೈದ್ಯರ ಮೃತದೇಹ ಕುಂದಾಪುರ ಬಳಿ ರೈಲ್ವೆ ಹಳಿಯಲ್ಲಿ ಪತ್ತೆ

ಕುಂದಾಪುರ: ನವೆಂಬರ್‌ 8 ರಂದು ನಾಪತ್ತೆಯಾಗಿದ್ದ ದಂತವೈದ್ಯರೊಬ್ಬರ ಮೃತದೇಹವು ಕುಂದಾಪುರ ಸಮೀಪದ ರೈಲ್ವೆ ಹಳಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಕಾಸರಗೋಡಿನ ಕುಂಬಳೆ ಬದಿಯಡ್ಕದ ದಂತ ವೈದ್ಯ ಡಾ. ಎಸ್. ಕೃಷ್ಣ ಮೂರ್ತಿ (57) ನವೆಂಬರ್‌ 8 ರಂದು ನಾಪತ್ತೆಯಾಗಿದ್ದು, ಇದೀಗ ಕುಂದಾಪುರದ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಎಂಬಲ್ಲಿಯ ರೈಲ್ವೆ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ದೊರೆತ ಕೂಡಲೇ ಕೃಷ್ಣ ಮೂರ್ತಿಯವರ ಕುಟುಂಬಿಕರು ಕುಂದಾಪುರಕ್ಕೆ ತೆರಳಿ ಮೃತ ದೇಹದ ಗುರುತು ಪತ್ತೆ […]