ಆಟೋ ರಿಕ್ಷಾ ಛಾವಣಿ ಮೇಲೆ ಚಲಿಸುವ ಉದ್ಯಾನ!! ದೆಹಲಿ ರಿಕ್ಷಾವಾಲನ ವಿನೂತನ ಪ್ರಯೋಗ!

ದೆಹಲಿ: ಭಾರತದ ರಾಜಧಾನಿಯಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮಹೇಂದ್ರ ಕುಮಾರ್ ಎಂಬುವರು ತಮ್ಮ ಪ್ರಯಾಣಿಕರನ್ನು ತಂಪಾಗಿರಿಸಲು ವಿಶಿಷ್ಟ ವಿಧಾನ ಒಂದನ್ನು ಅಳವಡಿಸಿಕೊಂಡಿದ್ದಾರೆ. ದೆಹಲಿಯ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ತಲುಪಿದರೂ ಇವರ ಆಟೋದೊಳಗಡೆ ಕುಳಿತು ಪ್ರಯಾಣ ಮಾಡುವ ಪ್ರಯಾಣಿಕರ ತಲೆ ತಂಪಾಗಿರುತ್ತದೆ. ತಮ್ಮ ಆಟೋದ ಛಾವಣಿಯ ಮೇಲೆ ಹಚ್ಚ ಹಸಿರಿನ ಉದ್ಯಾನವೊಂದನ್ನು ಬೆಳೆಸಿರುವ ಕುಮಾರ್, ಬೇಸಿಗೆಯ ಬಿರು ಬಿಸಿಲಿನಲ್ಲೂ ಪ್ರಯಾಣಿಕರಿಗೆ ತಂಪನ್ನುಣಿಸುತ್ತಿದ್ದಾರೆ. 48 ವರ್ಷ ವಯಸ್ಸಿನ ಕುಮಾರ್ ಅವರ ಈ ‘ಚಲಿಸುವ ಉದ್ಯಾನ’ವು ಗ್ರಾಹಕರ ಮನಸೂರೆಗೊಳ್ಳುತ್ತಿದೆ. ಇವರ ರಿಕ್ಷಾದಲ್ಲಿ […]
370 ನೇ ವಿಧಿಯ ರದ್ದತಿಯನ್ನು ಪ್ರಶ್ನಿಸುವ ಅರ್ಜಿಗಳ ಆಲಿಕೆ: 5 ನ್ಯಾಯಾಧೀಶರ ಪೀಠವನ್ನು ಮರು-ರಚಿಸಲು ಒಪ್ಪಿದ ಸುಪ್ರೀಂ ಕೋರ್ಟ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯ ನಿಬಂಧನೆಗಳನ್ನು ರದ್ದುಗೊಳಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಬೇಸಿಗೆ ರಜೆಯ ನಂತರ ಆಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಸಮ್ಮತಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು, ರಾಜ್ಯದಲ್ಲಿ ನಡೆಸಲಾಗುತ್ತಿರುವ ಡಿಲಿಮಿಟೇಶನ್ ಕಸರತ್ತನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲ ಶೇಖರ್ ನಾಫಡೆ ಅವರ ಸಲ್ಲಿಕೆಗಳನ್ನು […]
ನಾಲ್ಕನೇ ಅಲೆ ಭೀತಿ: ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣ, ಕಳೆದ 24 ಗಂಟೆಗಳಲ್ಲಿ 33 ಸಾವು

ನವದೆಹಲಿ: ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಕಳೆದ 24 ಗಂಟೆಗಳಲ್ಲಿ 33 ಸಾವುಗಳು, ಒಟ್ಟು ಸಾವಿನ ಸಂಖ್ಯೆಯನ್ನು 5,22,149 ಕ್ಕೆ ಏರಿಸಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ಬಿಡುಗಡೆ ಮಾಡಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,079. ದೇಶವು ಒಂದು ದಿನದಲ್ಲಿ 1,656 ಚೇತರಿಕೆ ದಾಖಲಿಸಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 4,25,17,724. ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದ್ದರೂ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುವವರ ಸಂಖ್ಯೆ […]