ಬೌದ್ಧ ಸನ್ಯಾಸಿಯ ವೇಷದಲ್ಲಿದ್ದ ಚೀನಾದ ಗೂಢಚಾರಿಣಿಯ ಬಂಧನ: ದೆಹಲಿ ಪೋಲೀಸರಿಂದ ಕಾರ್ಯಾಚರಣೆ
ನವದೆಹಲಿ: ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಚೀನಾದ ಮಹಿಳೆಯೊಬ್ಬಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬೌದ್ಧ ಸನ್ಯಾಸಿ ಎಂದು ಹೇಳಿಕೊಂಡ ಕೈ ರೂವೋ ಚೀನಾದ ಗೂಢಚಾರಿ ಎಂದು ಶಂಕಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಕೈ ರೂವೋ ಒಬ್ಬ ಸುಶಿಕ್ಷಿತ ಮತ್ತು ಕುತಂತ್ರಿ ಮಹಿಳೆಯಾಗಿದ್ದು, ಚೀನಾದ ಕಮ್ಯುನಿಸ್ಟ್ ನಾಯಕರು ತನ್ನನ್ನು ಕೊಲ್ಲಲು ಬಯಸಿದ್ದರು ಹಾಗಾಗಿ ತಾನು ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದಿದ್ದೆ ಎಂದು ಹೇಳುವ ಮೂಲಕ ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಳು ಎಂದು ಮೂಲವೊಂದು […]