ಉಸಿರುಗಟ್ಟಿಸುತ್ತಿದೆ ರಾಷ್ಟ್ರ ರಾಜಧಾನಿಯ ವಾತಾವರಣ: ಸತತ ನಾಲ್ಕನೇ ದಿನವೂ ಮಾಲಿನ್ಯದಿಂದ ಜನತೆ ಕಂಗಾಲು
ನವದೆಹಲಿ: ದೆಹಲಿಯಲ್ಲಿ ದಟ್ಟವಾದ ಮಬ್ಬು ಆವರಿಸಿದ್ದು, ಗಾಳಿಯ ಗುಣಮಟ್ಟವು ‘ತೀವ್ರ’ ವಿಭಾಗದಲ್ಲಿ ಉಳಿದಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಸೋಮವಾರದ ಅಂಕಿಅಂಶಗಳನ್ನು ತೋರಿಸಿದೆ. ಇದು ಸತತ ನಾಲ್ಕನೇ ದಿನವಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ‘ತೀವ್ರ’ ಗಾಳಿಯ ಗುಣಮಟ್ಟ ದಾಖಲಾಗಿದೆ. CPCB ಡೇಟಾ ಪ್ರಕಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 437 ದಾಖಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿನ ಮಾಲಿನ್ಯ ಬಿಕ್ಕಟ್ಟಿನ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. […]