ಉಡುಪಿ: ಸರ್ವ ಧರ್ಮದ ಸೌಹಾರ್ದ ದೀಪಾವಳಿ ಆಚರಣೆ
ಉಡುಪಿ: ನಗರದ ಅಲಂಕಾರ್ ಚಿತ್ರ ಮಂದಿರದ ಹಿಂಭಾಗದ ಮಾಂಡವಿ ಆಕ್ರೊಪೊಲಿಸ್ ವಸತಿ ಸಮುಚ್ಚಯದಲ್ಲಿ 300ಕ್ಕೂ ಹೆಚ್ಚಿನ ನಿವಾಸಿಗಳು ಸರ್ವ ಧರ್ಮದ ಸೌಹಾರ್ದ ದೀಪಾವಳಿ ಆಚರಿಸಿದರು. ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೀಪಾವಳಿಯ ಮಹತ್ವದ ಬಗ್ಗೆ ತಿಳಿಸಿದರು. ನಿವಾಸಿಗಳು ಸಾವಿರಾರು ಹಣತೆ ದೀಪಗಳನ್ನು ಬೆಳಗಿಸಿದರ, ಹೂಗಳಿಂದ ರಚಿಸಿದ ವಿಶೇಷ ರಂಗೋಲಿ, ಸುಡು ಮದ್ದು ಪ್ರದರ್ಶನ ನಡೆಯಿತು. ಸೋಮವಾರದಂದು ರಾತ್ರಿ ಮಹಿಳೆಯರು , ಮಕ್ಕಳು , ಪುರುಷರು ಒಟ್ಟಾಗಿ ದಾಂಡಿಯಾ ನೃತ್ಯ ಮಾಡಿದರು. […]
ಗುರುಪುರ: ಸಂತ ಮದರ್ ತೆರೇಸಾ ವಿಚಾರ ವೇದಿಕೆಯಿಂದ `ದೀಪಾವಳಿ ಸಂಭ್ರಮ’
ಗುರುಪುರ: ದೀಪಗಳ ಹಬ್ಬ ದೀಪಾವಳಿಯಲ್ಲಿ ಎರಡು ಅರ್ಥ ಕಾಣುತ್ತೇವೆ. ತನ್ನನ್ನು ಉರಿಸಿಕೊಂಡು ಬೇರೆಯವರಿಗೆ ಬೆಳಕು ಕೊಡುವುದು ಒಂದು ಅರ್ಥವಾದರೆ, ಒಂದು ದೀಪದಿಂದ ನೂರಾರು-ಸಾವಿರಾರು ದೀಪಗಳು ಬೆಳಗುತ್ತದೆ ಎಂಬುದು ಇನ್ನೊಂದು ಅರ್ಥ. ಬೆಳಕು ಜ್ಞಾನದ ಸಂಕೇತವೂ ಹೌದು. ಎಲ್ಲರೂ ಕೂಡಿಕೊಂಡು ಈ ಬೆಳಕಿನ ಹಬ್ಬ ಆಚರಿಸಬೇಕು. ಆಗಲೇ ದೀಪಾವಳಿ ಅರ್ಥಪೂರ್ಣವಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅಭಿಪ್ರಾಯಪಟ್ಟರು. ಮಂಗಳೂರಿನ ಸಂತ ಮದರ್ ತೆರೇಸಾ ವಿಚಾರ ವೇದಿಕೆಯು ವಾಮಂಜೂರು ಮಂಗಳಜ್ಯೋತಿ ಜಂಕ್ಷನ್‌ನಲ್ಲಿ ನ. 12ರಂದು ಆಯೋಜಿಸಿದ್ದ `ದೀಪಾವಳಿ […]