ಕೊರಂಗ್ರಪಾಡಿ ಅಪಘಾತ: ಗಾಯಾಳು ವಿದ್ಯಾರ್ಥಿ ಮೃತ್ಯು

ಉಡುಪಿ, ಜೂ.24: ಕೊರಂಗ್ರಪಾಡಿ ಸಮೀಪ ಜೂ.19ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಉದ್ಯಾವರ ಕೊರಂಗ್ರಪಾಡಿಯ ಎಂಇಟಿ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ರೋಶನ್ (16) ಎಂಬವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಣಿಯಾಡಿ ಬುಡ್ನಾರು ನಿವಾಸಿ ರಿಯಾಝ್ ಎಂಬವರ ಏಕೈಕ ಪುತ್ರರಾಗಿದ್ದ ರೋಶನ್, ಜೂ.19ರಂದು ಬೆಳಗ್ಗೆ ತನ್ನ ತಂದೆಯ ರಿಕ್ಷಾದಲ್ಲಿ ವಿಶೇಷ ತರಗತಿಗಾಗಿ ಶಾಲೆಗೆ ತೆರಳುತ್ತಿದ್ದರು. ಕುಕ್ಕಿಕಟ್ಟೆ ಕಡೆಯಿಂದ ಕೊರಂಗ್ರಪಾಡಿ ಕಡೆಗೆ ಹೋಗುತ್ತಿದ್ದ ರಿಕ್ಷಾ ವಾಹನವೊಂದನ್ನು ಓವರ್ ಟೇಕ್ […]
ಹಾಸನ: ಗೋವಿನಿಂದಲೇ ಸಾವಿಗೀಡಾದ ಗೋಕಳ್ಳ…!

ಹಾಸನ: ಗೋವು ಕಳ್ಳತನ ಮಾಡಲು ಹೋದ ವ್ಯಕ್ತಿಯೋರ್ವ ಗೋವಿನಿಂದಲೇ ಸಾವೀಗೀಡಾದ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಗೋಕಳ್ಳ ಗೋವಿಂದಪ್ಪ ಮೃತಪಟ್ಟವನು. ತೋಟದ ಮನೆಯಲ್ಲಿದ್ದ ಹಸುವೊಂದನ್ನು ಕಳ್ಳತನ ಮಾಡಿ ಸ್ವಲ್ಪ ದೂರ ಸಾಗಿಸಿದ್ದ. ಅನಂತರ ನಿರ್ಜನ ಪ್ರದೇಶದಲ್ಲಿ ಗೋವಿನ ಕಾಲನ್ನು ಕಟ್ಟಲು ಮುಂದಾದಾಗ ಆತನ ಮರ್ಮಾಂಗಕ್ಕೆ ಗೋವು ಒದ್ದಿರುವ ಪರಿಣಾಮ ಸ್ಥಳದಲ್ಲೇ ಆತ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ. ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ ಎನ್ನಲಾಗಿದ್ದು, ಈ ಘಟನೆ ಸಂಬಂಧಿಸಿದಂತೆ ನುಗ್ಗೆಹಳ್ಳಿ ಪೊಲೀಸ್ […]
ಮಂಗಳೂರು: ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ದುರ್ಮರಣ

ಮಂಗಳೂರು: ವಿದ್ಯುತ್ ದುರಸ್ಥಿ ಮಾಡಿದ ಬಳಿಕ ಪೂರೈಕೆ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಪವರ್ ಮೆನ್ ಸಾವನ್ನಪ್ಪಿರುವ ಘಟನೆ ದ.ಕ. ಜಿಲ್ಲೆಯ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಬುಧವಾರ ಸಂಭವಿಸಿದೆ. ಮೂಲತಃ ದಾವಣಗೆರೆ ನಿವಾಸಿ ಮಿಟ್ಯಾ ನಾಯಕ್(35), ಮೃತಪಟ್ಟ ದುರ್ದೈವಿ. ವಿದ್ಯುತ್ ಪರಿವರ್ತಕದಲ್ಲಿ ಚಾಲನೆ ಕೊಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದಿದೆ. ಇವರು ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮೆನ್ ಆಗಿದ್ದರು. ಇಂದು ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಲಾಗಿತ್ತು. ದುರಸ್ಥಿಯ ಬಳಿಕ ಲೈನ್ ಚಾರ್ಜ್ […]
ಕುಮಾರದಾರ ನದಿಯಲ್ಲಿ ಮುಳುಗಿ ಬಾಲಕ ಸಾವು

ಮಂಗಳೂರು: ಕುಮಾರಧಾರ ನದಿಯಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಆಲಂಕಾರು ಸಮೀಪದ ಶಾಂತಿಮೊಗರಲ್ಲಿ ಸಂಭವಿಸಿದೆ. ಸವಣೂರು ಸಮೀಪದ ಪರಣೆ ನಿವಾಸಿ ಅಶ್ಬಾಕ್ ಮೃತಪಟ್ಟ ಬಾಲಕ. ಈತ ಸವಣೂರು ಸ.ಪ.ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದು, ಇಂದು ಸ್ನೇಹಿತರೊಂದಿಗೆ ಶಾಂತಿಮೊಗರು ಸೇತುವೆಯ ಬಳಿ ಸ್ನಾನಕ್ಕೆ ಹೋಗಿದ್ದ. ನೀರಿನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಸುಳಿಗೆ ಸಿಲುಕಿದ ಈತ ಕೂಡಲೇ ನೀರಿನಲ್ಲಿ ನಾಪತ್ತೆಯಾಗಿದ್ದಾನೆ. ಬಳಿಕ ಸ್ಥಳೀಯರು ಬಾಲಕನ ಶವಕ್ಕಾಗಿ ಹುಡುಕಾಟ ನಡೆಸಿದ್ದು, ಕೆಲ ಹೊತ್ತಿನ ಬಳಿಕ ಶವ ಪತ್ತೆಯಾಗಿದೆ. […]
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಿಧನ

ಬೆಂಗಳೂರು: ಕರ್ನಾಟಕದ ಪ್ರಖ್ಯಾತ ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಅವರು ಗುರುವಾರ ಕೊನೆಯುಸಿರೆಳೆದರು. ರಂಗಭೂಮಿ ಕಲಾವಿದ 85 ವರ್ಷದ ಮಾಸ್ಟರ್ ಹಿರಣ್ಣಯ್ಯ ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಸಕಾಲಿಕ ರಾಜಕೀಯ, ಸಾಮಾಜಿಕ ವಿದ್ಯಮಾನಗಳನ್ನು ತಮ್ಮ ನಾಟಕದ ಸಂಭಾಷಣೆಗಳಲ್ಲಿ ಸುಲಲಿತವಾಗಿ ಎಳೆದು ತರುವ ಮೂಲಕ ಪಂಚ್ ನೀಡುವಲ್ಲಿ ಪ್ರಸಿದ್ಧಿ ಗಳಿಸಿದ್ದ ಹಿರಣ್ಣಯ್ಯ ಪತ್ನಿ ಮತ್ತು ಐವರು ಮಕ್ಕಳನ್ನು ಅಗಲಿದ್ದಾರೆ.