ಬೈಂದೂರು: ಬಾವಿಗೆ ಬಿದ್ದು ವೃದ್ಧೆ ಸಾವು

ಬೈಂದೂರು: ಬಾವಿಯಲ್ಲಿ‌ ನೀರು ತೆಗೆಯುತ್ತಿರುವಾಗ ಆಯತಪ್ಪಿ ಬಾವಿಯೊಳಗೆ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಪಡುವರಿ ಗ್ರಾಮದಲ್ಲಿ ಎ. 29 ರಂದು ಮಧ್ಯಾಹ್ನ ನಡೆದಿದೆ. ಪಡುವರಿ ಗ್ರಾಮದ ನಿವಾಸಿ, 75 ವರ್ಷದ ಇಮಿಲಿಯಾ ನಜ್ರೇತ್ ಮೃತ ದುರ್ದೈವಿ. ಇವರು ನಿನ್ನೆ ಮಧ್ಯಾಹ್ನ ಮನೆಯ ಬಾವಿಯಿಂದ ನೀರನ್ನು ಸೇದುತ್ತಿದ್ದರು. ಈ ವೇಳೆ ಆಯತಪ್ಪಿ ಬಾವಿಯ ನೀರಿಗೆ ಬಿದ್ದಿದ್ದು, ಕೂಡಲೇ ಅವರನ್ನು ಪ್ರದೀಪ್ ಎಂಬವರು ಮೇಲಕ್ಕೆ ಎತ್ತಿದ್ದರು. ತಕ್ಷಣವೇ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಪರೀಕ್ಷಿಸಿದ […]

ಅಪಘಾತದಿಂದ ಸಾವು: ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿ, ಹಿಂಬದಿ ಕುಳಿತಿದ್ದ ಮಹಿಳೆಯ ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2017 ಅಕ್ಟೋಬರ್ 21 ರಂದು ಸಂಜೆ 5.15 ರ ಸುಮಾರಿಗೆ ಪ್ರತಾಪ ಸುದರ್ಶನ ಶೆಟ್ಟಿ ಎಂಬಾತನು ಜಯಲಕ್ಷಿ ಎಂಬ ಮಹಿಳೆಯನ್ನು ಬೈಕಿನ ಹಿಂಬದಿ ಕೂರಿಸಿಕೊಂಡು, ಅತಿವೇಗ, ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸುತ್ತಿದ್ದಾಗ, ಉಡುಪಿ ತಾಲೂಕು ಪುತ್ತೂರು ಗ್ರಾಮದ ರೊಬೋಸಾಫ್ಟ್ ಟೆಕ್ನಾಲಜೀಸ್ […]

ಸಿಡಿಲು ಬಡಿದು ಯುವಕ‌ ಮೃತ್ಯು

ಕಾರ್ಕಳ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ‌ ತಾಲೂಕಿನ ನೂರಾಲ್ ಬೆಟ್ಟು ಗ್ರಾಮದಲ್ಲಿ ಸೋಮವಾರ ನಡೆದಿದೆ. ನೂರಾಲ್ ಬೆಟ್ಟುವಿನ ಜಾಣಮನೆ ನಿವಾಸಿ 41 ವರ್ಷದ ಜಿಗೀಶ್ ಜೈನ್ ಮೃತ ದುರ್ದೈವಿ. ಜಿಗೀಶ್ ಮನೆಯಲ್ಲಿ ಇದ್ದ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಸಿಡಿಲಿನ ಹೊಡೆತಕ್ಕೆ ಜಿಗೀಶ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕೆಎಸ್ಆರ್ಟಿಸಿ ಬಸ್ ಢಿಕ್ಕಿ ಬೈಕ್ ಸವಾರ ಸಾವು

ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಂಜದಲ್ಲಿ ಶುಕ್ರವಾರ ಸಂಭವಿಸಿದೆ. ಸುಳ್ಯ ನಿವಾಸಿ ಶೀನಪ್ಪ ರೈ(53)  ಮೃತ ದುರ್ದೈವಿ. ಪುತ್ತೂರಿನಿಂದ ಕಾಣಿಯೂರು ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಶೀನಪ್ಪ ರೈ ಸುಬ್ರಹ್ಮಣ್ಯದ ಕೆ.ಎಸ್. ಎಸ್.ಕಾಲೇಜಿನಲ್ಲಿ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೇಣೂರು: ಫಲ್ಗುಣಿ‌ ನದಿಯಲ್ಲಿ ಮೃತದೇಹ ಪತ್ತೆ

ವೇಣೂರು, ಜೂ. 26: ಬೆಳ್ತಂಗಡಿ ತಾಲೂಕಿನ ವೇಣೂರು ಪಲ್ಗುಣಿ ನದಿ ಸಮೀಪದಲ್ಲಿ ಅನುಮಾನಸ್ಪದವಾಗಿ ವ್ಯಕ್ತಿಯ ಮೃತ ದೇಹ ಬುಧವಾರ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿ ಗುಣಪಾಲ್ (೬೦) ಎಂದು ಗುರುತಿಸಲಾಗಿದೆ. ಮೃತ ಗುಣಪಾಲ್ ಈ ಹಿಂದೆ ಸ್ಥಳೀಯ ಪಾರ್ಶ್ವನಾಥ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು ಸ್ಥಳೀಯರಿಗೆ ಚಿರಪರಿಚಿತರಾಗಿದ್ದರು. ಇಂದು ಬೆಳಿಗ್ಗೆ ಶವ ನದಿಯಲ್ಲಿ ತೇಲುತ್ತಿರುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ಸ್ಥಳೀಯರ ಮಾಹಿತಿಯಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.