ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ: ಕಾರ್ಕಳದ 13 ಯುವಕರಿಗೆ ವಸತಿ ಸೌಲಭ್ಯ

ವಿಜಯಪುರ: ಮಾ 30: ಮಹಾರಾಷ್ಟ್ರದ ಭಾರಾಮತಿಯಿಂದ ಉಡುಪಿ ಜಿಲ್ಲೆಗೆ ತೆರಳುತ್ತಿದ್ದ 13 ಯುವಕರು ವಸತಿ ಮತ್ತು ಊಟದ ಸೌಕರ್ಯವಿಲ್ಲದೆ ಲಾಕ್‍ಡೌನ್ ಜಾರಿಯಿಂದ ನಗರದಲ್ಲಿ ಸಿಲುಕಿಕೊಂಡಿದ್ದ ಕಾರ್ಕಳದ 13 ಯುವಕರಿಗೆ ವಸತಿ ಸೌಲಭ್ಯ ಕಲ್ಪಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾನವಿಯತೆ ಮೆರೆದಿದ್ದಾರೆ. ಇಂದು ನಗರದ ಇಟಗಿ ಪೆಟ್ರೋಲ್‍ಪಂಪ್, ಆಕಾಶವಾಣಿ ಕೇಂದ್ರ, ಸಾಯಿಪಾರ್ಕ, ಹಮಾಲಕಾಲನಿ ಸೇರಿದಂತೆ ವಿವಿಧ ಕಡೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು […]