ಸುರತ್ಕಲ್ ಟೋಲ್ ಗೇಟ್ ರದ್ದಿಗೆ ಕೇಂದ್ರ ಅಸ್ತು: ಟ್ವೀಟ್ ಮಾಡಿ ಮಾಹಿತಿ ನೀಡಿದ ಸಂಸದ

ಸುರತ್ಕಲ್: ಕಳೆದ ಏಳು ವರ್ಷಗಳ ನಿರಂತರ ಬೇಡಿಕೆ ಮತ್ತು ಎಡೆಬಿಡದ ಹೋರಾಟದ ಬಳಿಕ ಕಡೆಗೂ ಸುರತ್ಕಲ್ ಟೋಲ್ ಗೇಟ್ ರದ್ದಾಗಿ ಜನರಿಗೆ ನರಕದಿಂದ ಮುಕ್ತಿ ದೊರೆಯಲಿದೆ. ಟೋಲ್ ಗೇಟ್ ರದ್ದಾಗುವ ಬಗ್ಗೆ ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು ಎಂದು […]

ದ.ಕ ನೂತನ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ಅಧಿಕಾರ ಸ್ವೀಕಾರ

ಮಂಗಳೂರು: ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ರವಿಕುಮಾರ್ ಎಂ ಆರ್ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮೈಸೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಪ್ರಭಾರಿ ಜಿಲಾಧಿಕಾರಿಯಾಗಿ ನೇಮಕಗೊಂಡಿದ್ದ ಡಾ.ಕುಮಾರ್ ಅವರಿಂದ ಅಧಿಕಾರ ಸ್ವೀಕರಿಸಿದರು. ರವಿಕುಮಾರ್ 2012 ರ ಬ್ಯಾಚ್‌ನ ಕರ್ನಾಟಕ ಕೇಡರ್ ನ ಐಎಎಸ್ ಮತ್ತು ಪ್ರಸ್ತುತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯ ಪ್ರಪಥಮ ಉಸ್ತುವಾರಿ ಸಚಿವನಾದದ್ದು ಹೆಮ್ಮೆಯ ವಿಚಾರ: ಕೆ.ಜಯಪ್ರಕಾಶ್ ಹೆಗ್ಡೆ

ಉಡುಪಿ: 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾಗಿ ಮಾರ್ಪಟ್ಟ ಉಡುಪಿ ಜಿಲ್ಲೆಯ ಪ್ರಪಥಮ ಉಸ್ತುವಾರಿ ಸಚಿವನಾದದ್ದು ನನಗೆ ಹೆಮ್ಮೆ ನೀಡುವ ವಿಷಯ. ಅಂದಿನಿಂದ ಇಂದಿನವರೆಗೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿಪರ ಚಟುವಟಿಕೆಗಳು ನಡೆದಿದ್ದು, ಮುಂದೆಯೂ ಕೂಡ ಅನೇಕ ಅಭಿವೃದ್ಧಿ ಕೆಲಸಗಳು ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ಮಂಗಳವಾರ ನಗರದ ಐ.ಎಮ್.ಎ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ […]

ದೇಶದ ಎರಡನೆ ಮತ್ತು ಕರ್ನಾಟಕದ ಮೊದಲನೆ ಕತ್ತೆ ಫಾರ್ಮ್ ದಕ್ಷಿಣ ಕನ್ನಡದಲ್ಲಿ ಆರಂಭ: ಟೆಕ್ಕಿ ಕೆಲಸ ಬಿಟ್ಟು ಕೃಷಿಕನಾದ ಶ್ರೀನಿವಾಸ್ ಗೌಡ ಸಾಧನೆ

ಬಂಟ್ವಾಳ: 42 ವರ್ಷದ ಶ್ರೀನಿವಾಸ್ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕತ್ತೆ ಸಾಕಣೆ ಆರಂಭಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಜೂನ್ 8 ರಂದು ಪ್ರಾರಂಭವಾದ ಈ ಫಾರ್ಮ್ ಕರ್ನಾಟಕದಲ್ಲಿ ಮೊದಲನೆಯದು ಮತ್ತು ದೇಶದಲ್ಲೇ ಎರಡನೆಯದು. ಇಂತಹ ಕತ್ತೆ ಸಾಕಣೆ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮಾತ್ರ ಇದೆ. ತಿರಸ್ಕರಿಸಲಾದ ಮತ್ತು ಕಡಿಮೆ ಮೌಲ್ಯದ ಕತ್ತೆಗಳ ದುರವಸ್ಥೆ ನೋಡಿ ಮನನೊಂದು ಕತ್ತೆ ಸಾಕಣೆ ಫಾರ್ಮ್ ಪ್ರಾರಂಭಿಸಿದೆ ಎಂದು ತೋಟದ ಮಾಲೀಕ ಶ್ರೀನಿವಾಸ್ ಗೌಡ ಹೇಳುತ್ತಾರೆ. ಬಿಇ ಪದವೀಧರರಾಗಿರುವ […]

ದ.ಕ ಜಿಲ್ಲೆಯಲ್ಲಿ ಕಡತ ವಿಲೇವಾರಿ ಅಭಿಯಾನ: ಫೆ. 28 ರೊಳಗೆ ಬಾಕಿ ಇರುವ 82000 ಕಡತಗಳಿಗೆ ಮುಕ್ತಿ: ಸುನಿಲ್ ಕುಮಾರ್

  ದಕ್ಷಿಣ ಕನ್ನಡದ 45 ಸರಕಾರಿ ಕಚೇರಿಗಳಲ್ಲಿ ಬಾಕಿ ಉಳಿದಿರುವ 82,400 ಕಡತಗಳನ್ನು ಫೆ.19 ರಿಂದ ಫೆ.28ರೊಳಗೆ ವಿಶೇಷ ಕಡತ ತೆರವು ಅಭಿಯಾನದಡಿ ವಿಲೇವಾರಿ ಮಾಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದರು. ಅವರು ಫೆಬ್ರವರಿ 19 ಶುಕ್ರವಾರದಂದು ಮಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರೊಂದಿಗೆ ಕಡತ ವಿಲೇವಾರಿ ಅಭಿಯಾನಕ್ಕೆ ಚಾಲನೆ ನೀಡುತ್ತಾ ಮಾತನಾಡಿ, ಬಾಕಿ ಉಳಿದಿರುವ ಕಡತಗಳನ್ನು ಬಾಕಿ ಉಳಿದಿರುವ ಹಳೆಯ ಕಡತಗಳು, ಕುಂದುಕೊರತೆಗಳ ಬಾಕಿ ಇರುವ ಅರ್ಜಿಗಳು […]