ಒಟಿಪಿ ಇಲ್ಲದೆಯೇ ಆಧಾರ್ ದತ್ತಾಂಶ ಬಳಸಿ ಬ್ಯಾಂಕ್ ನಿಂದ ಹಣ ಎಗರಿಸುತ್ತಿರುವ ವಂಚಕರು; ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಿದವರಿಗೆ ತಲೆನೋವಾದ ಸೈಬರ್ ಕಳ್ಳರು

ಮಂಗಳೂರು: ಸೈಬರ್ ಕಳ್ಳರು ಆಧಾರ್ ಬಯೋಮೆಟ್ರಿಕ್ ದತ್ತಾಂಶಗಳನ್ನು ಕದ್ದು ನಂತರ ಜನರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಒಟಿಪಿ ಇಲ್ಲದೆಯೇ ಎಗರಿಸುತ್ತಿರುವ ಘಟನೆ ನಗರದಲ್ಲಿ ವರದಿಯಾಗುತ್ತಿದೆ. ಹೊಸ ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಹಲವರು ತಮ್ಮ ಆಧಾರ್ ಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಯಿಂದ ತಲಾ 10,000 ರೂ ಕಳೆದುಕೊಂಡಿದ್ದಾರೆ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಬಯೋಮೆಟ್ರಿಕ್ಸ್ ಮತ್ತು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಿವರಗಳನ್ನು ತೆಗೆದುಕೊಂಡ ನಂತರ ಅನೇಕರು ಇದೇ […]

ಸ್ನ್ಯಾಪ್‌ಚಾಟ್ ಹಾಗೂ ಇನ್ಸ್ಟಾಗ್ರಾಂ ಗಳಲ್ಲಿ ಅಪ್ರಾಪ್ತ ಬಾಲಕಿ ಹಾಗೂ ಯುವತಿಯ ತೇಜೋವಧೆ: ಸೆನ್ ಠಾಣೆಯಲ್ಲಿ ದೂರು ದಾಖಲು

ಉಡುಪಿ: ಇಲ್ಲಿನ 14 ವರ್ಷದ ಬಾಲಕಿಯೊಬ್ಬಳ ಪೋಷಕರು ತಮ್ಮ ಮಗಳ ಫೋಟೋವನ್ನು ಅಸಭ್ಯ ರೀತಿಯಲ್ಲಿ ರೂಪಾಂತರಿಸಿ(ಮಾರ್ಫ್) ಸ್ನ್ಯಾಪ್‌ಚಾಟ್‌ ವೀಡಿಯೋನಲ್ಲಿ ಪ್ರಸಾರ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಉಡುಪಿ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಬಾಲಕಿಯ ತಾಯಿ, ತನ್ನ ಮಗಳ ಫೋಟೋವನ್ನು ಅಸಭ್ಯ ವೀಡಿಯೊದಲ್ಲಿ ಬಳಸಿದ್ದಾರೆ ಮತ್ತು ಜುಲೈ 30 ರಂದು ಸ್ನ್ಯಾಪ್‌ಚಾಟ್‌ನಲ್ಲಿ ತನ್ನ ಸಂಪರ್ಕಗಳಿಗೆ ಪ್ರಸಾರ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಕಲಿ ಸ್ನ್ಯಾಪ್‌ಚಾಟ್ ಖಾತೆಯನ್ನು ಬಳಸಿಕೊಂಡು ವೀಡಿಯೊವನ್ನು ಪ್ರಸಾರ […]