ಮಂದಿರ 360: ಮನೆಯಲ್ಲಿ ಕುಳಿತೇ ಮಂದಿರ ದರ್ಶನ; ಕೇಂದ್ರ ಸಂಸ್ಕೃತಿ ಸಚಿವಾಲಯದ ಭಾವಪೂರ್ಣ ಉಡುಗೊರೆ

ನವದೆಹಲಿ: ಜೀವನದಲ್ಲಿ ಒಮ್ಮೆಯಾದರೂ ತೀರ್ಥಯಾತ್ರೆ ಕೈಗೊಳ್ಳಬೇಕು, ದೇಶದ ದೇವಸ್ಥಾನಗಳನ್ನೆಲ್ಲಾ ನೋಡಿ ಕೃತಾರ್ಥರಾಗಬೇಕು ಎಂದು ಬಯಸುವ ಅದೆಷ್ಟೋ ಆಸ್ತಿಕರಿಗೆ ಸಮಯದ ಅಭಾವ, ಆರ್ಥಿಕತೆಯ ಕೊರತೆ ಮತ್ತು ದೈಹಿಕ ಸಮಸ್ಯೆಗಳಿಂದಾಗಿ ತೀರ್ಥಯಾತ್ರೆ ಕೈಗೊಳ್ಳುವುದು ಕನಸಾಗಿಯೇ ಉಳಿಯುತ್ತದೆ. ಇಂತಹ ಸದ್ಭಕ್ತರಿಗಾಗಿಯೆ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯವು ಒಂದು ಅತ್ಯಪೂರ್ವವಾದ ಉಡುಗೊರೆಯನ್ನು ನೀಡಿದೆ. ಅಂದೆಂದರೆ, ಮಂದಿರ 360(ಟೆಂಪಲ್ 360). ಏನಿದು ಟೆಂಪಲ್ 360? ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ವೈಬ್ ಸೈಟ್ https://temple360.in ಭಾರತದ ತೀರ್ಥಯಾತ್ರಾರ್ಥಿಗಳಿಗೆ ಎಲ್ಲ ದೇವಸ್ಥಾನಗಳಿಗೆ ವರ್ಚುವಲ್ ಪ್ರವಾಸವನ್ನು ಏರ್ಪಡಿಸಿದೆ. […]