ಮಂಗಳೂರಿಗೆ ಮೂರನೇ ಐಷಾರಾಮಿ ಹಡಗು ಎಂಎಸ್ ನೌಟಿಕಾ ಆಗಮನ

ಮಂಗಳೂರು: ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೇ ಐಷಾರಾಮಿ ಹಡಗು ಆಗಮಿಸಿದೆ. ಎಂಎಸ್ ನೌಟಿಕಾ ಎನ್ನುವ ಈ ಹಡಗಿನಲ್ಲಿ ಸುಮಾರು 548 ಪ್ರಯಾಣಿಕರು ಹಾಗೂ 397 ಸಿಬ್ಬಂದಿಗಳು ಪ್ರವಾಸ ಮಾಡುತ್ತಿದ್ದು, ಹಡಗು 30,277 ಟನ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾಲ್ಡೀವ್‌ ದ್ವೀಪಕ್ಕೆ ಪ್ರಯಾಣ ಬೆಳೆಸಿರುವ ಈ ಹಡಗು ಮಸ್ಕತ್‌ನಿಂದ ಭಾರತಕ್ಕೆ ಬಂದಿದ್ದು, ಮುಂಬೈ, ಮೊರ್ಮಗಾಂವ್ ಮೂಲಕ ಮಂಗಳೂರು ಬಂದರು ಪ್ರವೇಶಿಸಿದೆ. ನವ ಮಂಗಳೂರು ಬಂದರಿಗೆ ಗುರುವಾರ ಬೆಳಿಗ್ಗೆ 6 ಗಂಟೆಗೆ ತಲುಪಿದ್ದು, ಅದರಲ್ಲಿದ್ದ ಪ್ರಯಾಣಿಕರು ಕುದ್ರೋಳಿ ಗೋಕರ್ಣನಾಥ […]