ನಮ್ಮ ಕುಡ್ಲಕ್ಕೆ ಬಂದವು ಎರಡೆರಡು ಐಷಾರಾಮಿ ಕ್ರೂಸರ್ಗಳು: ಕರಾವಳಿಯಲ್ಲಿ ಮತ್ತೆ ಗರಿಗೆದರಿದ ಪ್ರವಾಸೋದ್ಯಮ ಚಟುವಟಿಕೆ

ಮಂಗಳೂರು: ಬರೋಬ್ಬರಿ ಎರಡು ವರ್ಷಗಳ ವಿರಾಮದ ಬಳಿಕ ಕುಡ್ಲದ ಕರಾವಳಿಯ ಎನ್. ಎಂ.ಪಿ.ಟಿ ಬಂದರಿನಲ್ಲಿ ಎರಡೆರಡು ಐಷಾರಾಮಿ ಕ್ರೂಸರ್ ಗಳು ತಂಗಿ ಪ್ರವಾಸೋದ್ಯಮ ಚಟುವಟಿಕೆ ಪುನಃ ಗರಿಗೆದರಿದ ಸೂಚನೆ ನೀಡಿದವು. ನ.28 ರಂದು ಪ್ರಸಕ್ತ ಕ್ರೂಸ್ ಋತುವಿನ ಮೊದಲ ಕ್ರೂಸ್ ಹಡಗು “ಎಮ್.ಎಸ್ ಯುರೋಪ 2” ಬರ್ತ್ ನಂ. 4 ರಲ್ಲಿ ತಂಗಿತ್ತು. ಮಾಲ್ಟಾ (ಯುರೋಪ್) ಧ್ವಜದ ಅಡಿಯಲ್ಲಿ ನೌಕಾಯಾನ ಮಾಡುತ್ತಿದ್ದ ಎಂಎಸ್ ಯುರೋಪಾ 2, ಒಟ್ಟು 271 ಪ್ರಯಾಣಿಕರು ಮತ್ತು 373 ಸಿಬ್ಬಂದಿಗಳನ್ನು ಹೊಂದಿತ್ತು. 224.38 […]