ಬಸ್ಸು-ಬೈಕ್ ಮುಖಾಮುಖಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಹೆಬ್ರಿ : ಹೆಬ್ರಿ ಬಳಿಯ ಮುದ್ರಾಡಿಯ ಸುಬ್ಬಣ್ಣ ಕಟ್ಟೆ ಕ್ರಾಸ್ ನಲ್ಲಿ ಖಾಸಗಿ ಬಸ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಏ. 21 ರಂದು ಸಂಭವಿಸಿದೆ. ಬೈಕ್ ಸವಾರ ಮುದ್ರಾಡಿಯ ರಕ್ಷಣ್ ಆಚಾರ್ಯ (21) ಮೃತಪಟ್ಟವರು. ಮುದ್ರಾಡಿಯ ನಿತ್ಯಾನಂದ ಆಚಾರ್ಯ ಅವರ ಪುತ್ರ. ರಕ್ಷಣ್ ಆಚಾರ್ಯ ಅವರು ಮರದ ಕೆಲಸ ನಿರ್ವಹಿಸುತ್ತಿದ್ದರು. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.